ಚೆಟ್ಟಳ್ಳಿ, ಡಿ. 21: ಈರಳೆವಳಮುಡಿ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಗ್ರಾ.ಪಂ. ಸದಸ್ಯರುಗಳು, ಮಕ್ಕಳ ತಾಯಂದಿರು ಹಾಗೂ ಆರೋಗ್ಯ ಇಲಾಖೆಯವರು ಹಾಜರಿದ್ದರು. ಅಂಗನವಾಡಿ ಕಾರ್ಯಕರ್ತೆ ಸಿ.ಕೆ. ಬೊಳ್ಳಮ್ಮ ಪ್ರಾರ್ಥಿಸಿ, ಕೇಂದ್ರದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಆರೋಗ್ಯವಂತ ಮೂರು ಮಕ್ಕಳಿಗೆ ಹಿರಿಯ ಆರೋಗ್ಯ ಕಾರ್ಯಕರ್ತರು ಬಹುಮಾನ ವಿತರಿಸಿದರು.