ಕುಶಾಲನಗರ, ಡಿ. 21: ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಕರೆಯ ಮೇರೆಗೆ ಕಳೆದ ಎರಡು ದಿನಗಳಿಂದ ದೇಶವ್ಯಾಪಿ ನಡೆಯು ತ್ತಿರುವ ಅನಿರ್ದಿಷ್ಟ ಕಾಲ ಮುಷ್ಕರ ಹಿನ್ನೆಲೆ ನೂರಾರು ನೌಕರರು ಕುಶಾಲ ನಗರ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ನೌಕರರ ವೇತನ ಮತ್ತಿತರ ಸೌಲಭ್ಯಕ್ಕಾಗಿ ಕಮಲೇಶ್‍ಚಂದ್ರ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಗೊಳಿಸಬೇಕು. ಮತ್ತಿತರ ಬೇಡಿಕೆಯನ್ನು ಕೂಡಲೆ ಈಡೇರಿಸ ಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸೋಮವಾರಪೇಟೆ ತಾಲೂಕು ನೌಕರರ ಪ್ರತಿನಿಧಿಗಳಾದ ಜಿನ್ನಪ್ಪ, ನಾಗೇಶ್, ಜೀವನ್, ಶಿವಕುಮಾರ್, ಮೀನಾಕ್ಷಿ, ಮುರಳೀಧರ್, ಯಶೋಧ, ಮನೋಜ್, ತಾರಾ ಮತ್ತಿತರರು ಇದ್ದರು.