ಮಡಿಕೇರಿ, ಡಿ. 21: ಅಖಿಲ ಕೊಡವ ಪಣಿಕ ಸಮಾಜದ ವಾರ್ಷಿಕ ಮಹಾಸಭೆ ತಾ. 23 ರಂದು ಬೆಳಿಗ್ಗೆ 10.30 ಗಂಟೆಗೆ, ಕಾವಾಡಿ ಮಹಿಳಾ ಸಮಾಜದ ಕಟ್ಟಡದಲ್ಲಿ ನಡೆಯಲಿದೆ.
ಸಮಾಜದ ಅಧ್ಯಕ್ಷ ಜಿ. ದಿನೇಶ್ ಸೋಮಯ್ಯ ಅಧ್ಯಕ್ಷತೆ ವಹಿಸಲಿದ್ದು, ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಬಬ್ಬೀರ ಸರಸ್ವತಿ ಅವರು ಉದ್ಘಾಟಿಸಲಿರುವ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಹಾಗೂ ಹಿರಿಯರಾದ ಪವ್ವೇರಿಯಂಡ ಬೋಪಣ್ಣ ಅವರುಗಳು ಭಾಗವಹಿಸಲಿದ್ದಾರೆ.