ನಾಪೋಕ್ಲು, ಡಿ. 21: ಸಮೀಪದ ಪಾರಾಣೆ ಕೇಂದ್ರ ಕ್ರೀಡಾಮಂಡಳಿ ವತಿಯಿಂದ ಸತತವಾಗಿ 57ವರ್ಷಗಳಿಂದ ನಡೆಸಿಕೊಂಡು ಬಂದಿರುವ ಪಾರಾಣೆ ಕೈಲುಮುಹೂರ್ತ ಅಂತರಗ್ರಾಮ ಕ್ರೀಡಾಕೂಟ ಆಚರಿಸಲಾಯಿತು.

ಜಿಲ್ಲೆಯಲ್ಲಿ ಈಚೆಗೆ ಸಂಭವಿಸಿದ ಪ್ರಕೃತಿ ವಿಕೋಪದ ಪರಿಣಾಮವಾಗಿ ಸರಳವಾಗಿ ಕ್ರೀಡಾ ಕೂಟ ಹಮ್ಮಿಕೊಳ್ಳಲಾಯಿತು. ಧ್ವಜಾರೋಹಣ ಮತ್ತು ಪಥಸಂಚಲನ ನಡೆಸಿ ಕ್ರೀಡೋತ್ಸವಕ್ಕೆ ಅಂತ್ಯ ಹಾಡಲಾಯಿತು. ಕಾರ್ಯಕ್ರಮದಲ್ಲಿ ಕ್ರೀಡಾಮಂಡಳಿ ಅಧ್ಯಕ್ಷ ಕಟ್ಟಿ ಕುಶಾಲಪ್ಪ ಮಾತನಾಡಿ ಕೊಡಗಿನಲ್ಲಿ ಪ್ರಕೃತಿ ವಿಕೋಪದಲ್ಲಿ ನಷ್ಟ ಅನುಭವಿಸಿದ ಸಂತ್ರಸ್ತರಿಗೆ ಸಾಂತ್ವನದ ಮಾತುಗಳನ್ನು ಹೇಳಿದರು. ನೆರೆ ಸಂತ್ರಸ್ತರ ವಿದ್ಯಾರ್ಥಿಗಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಾಯಿಶಂಕರ ಶಾಲೆಗೆ ಕ್ರೀಡಾಮಂಡಳಿ ವತಿಯಿಂದ 20000 ರೂಗಳ ಸಹಾಯಧನ ನೀಡಲು ನಿರ್ಧರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾರಾಣೆ ಕ್ರೀಡಾ ಮಂಡಳಿಯ ಅಧ್ಯಕ್ಷ ಪಾಡಿಯಂಡ ಕಟ್ಟಿ ಕುಶಾಲಪ್ಪ, ಕಾರ್ಯದರ್ಶಿ ದೇವಜನ ಧನೇಶ್, ಉಪಾಧ್ಯಕ್ಷೆ ಬೊಳ್ಳಚೆಟ್ಟೀರ ಜಯಂತಿ, ಕ್ರೀಡಾಮಂಡಳಿ ಸದಸ್ಯರು, ಐದು ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.