ಮಡಿಕೇರಿ, ಡಿ. 21: ಕೊಡಗು ಪೊಲೀಸ್ ಕೇಂದ್ರ ಮೈದಾನದಲ್ಲಿ ನಿನ್ನೆಯಿಂದ ಆರಂಭಗೊಂಡಿರುವ ಕ್ರೀಡಾಕೂಟದಲ್ಲಿ ಇಂದು ಅಧಿಕಾರಿಗಳ ಸಹಿತ ಪೊಲೀಸ್ ಸಿಬ್ಬಂದಿ ಫೈರಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಕ್ರಿಕೆಟ್, ಕಬಡ್ಡಿ, ರಿಲೇ ಓಟ, ವಾಲಿಬಾಲ್, ಬ್ಯಾಡ್ಮಿಂಟನ್, ಹಗ್ಗಜಗ್ಗಾಟ ಮುಂತಾದ ಪೈಪೋಟಿ ನಡೆಯಿತು.
ಎಲ್ಲಾ ಸ್ಪರ್ಧೆಗಳಲ್ಲಿ ನಿನ್ನೆ ಹಾಗೂ ಇಂದಿನ ವಿಜೇತರಿಗೆ ತಾ. 22 ರಂದು (ಇಂದು) ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡಲಾಗುವದು. ಕರ್ನಾಟಕ ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಶರತ್ ಚಂದ್ರ, ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಮೊದಲಾದವರು ಪಾಲ್ಗೊಳ್ಳಲಿದ್ದಾರೆ.