ಮಡಿಕೇರಿ, ಡಿ. 21: ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಪ್ರಧಾನ ಸಂಚಾಲಕರಾಗಿ ವಕೀಲ ಕುಂಞ ಅಬ್ದುಲ್ಲಾ, ಸಹ ಸಂಚಾಲಕರಾಗಿ ಬಿ.ಎಂ. ಸುರೇಶ್ ಹಾಗೂ ಕರಿಕೆಯ ರಮಾನಾಥ್ ಅವರುಗಳು ಆಯ್ಕೆಯಾಗಿದ್ದಾರೆ.
ಗೌರವ ಸಂಚಾಲಕರಾಗಿ ವಕೀಲ ವಿದ್ಯಾಧರ್, ಸದಸ್ಯರಾಗಿ ಜನಾರ್ಧನ್, ರಜಾóಕ್, ಪೂವಯ್ಯ, ಬಶೀರ್, ನೆರವಂಡ ಉಮೇಶ್, ಸೋಮವಾರಪೇಟೆ ತಾಲೂಕು ಸಂಚಾಲಕರಾಗಿ ವಕೀಲ ಚಂದನ್ ಹಾಗೂ ಜಯರಾಮ್, ಮಡಿಕೇರಿ ತಾಲೂಕು ಸಂಚಾಲಕರಾಗಿ ಅವಂದೂರಿನ ಗಿರೀಶ್, ವೀರಾಜಪೇಟೆ ಸಂಚಾಲಕರಾಗಿ ವಕೀಲ ಕೆ.ಪಿ. ಸುನಿಲ್ ಹಾಗೂ ಮಾರ್ಗದರ್ಶಕರಾಗಿ ಕೆ.ಕೆ. ಮಂಜುನಾಥ್‍ಕುಮಾರ್ ಆಯ್ಕೆ ಗೊಂಡಿದ್ದಾರೆ.
ಕುಶಾಲನಗರದ ಹಳ್ಳಿಮನೆ ಸಭಾಂಗಣದಲ್ಲಿ ವಲಯ ಸಂಚಾಲಕ ಕೆ.ಎಸ್. ಸತೀಶ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.