ವೀರಾಜಪೇಟೆ, ಡಿ. 21: ಸಿನಿಮಾರಂಗದ ನಟಿ ಮಾಳೇಟಿರ ಅನೂಷ ಪೂವಮ್ಮ, ‘ಪೇಟೆ ಹುಡುಗಿ ಹಳ್ಳಿ ಲೈಫ್’ನ ಶಾನ್ ಪೊನ್ನಮ್ಮ, ಕ್ರೀಡಾ ಕ್ಷೇತ್ರದ ಹ್ಯಾಂಡ್ ಬಾಲ್ ಮತ್ತು ಬಾಸ್ಕೆಟ್‍ಬಾಲ್‍ನಲ್ಲಿ ಸಾಧನೆ ಮಾಡಿದ ಮಾಳೇಟಿರ ಪಲ್ಲವಿ, ಗೌತಮಿ, ಗಾನವಿ ಪೂಣಚ್ಚ, ಫುಟ್ಬಾಲ್ ಆಟಗಾರ್ತಿ ಲಕ್ಷ ದೇಚಮ್ಮ, ಕರಾಟೆಯಲ್ಲಿ ಕಿಲನ್ ಮಹೇಶ್, ಎಂ.ಬಿ. ಕಾಳಪ್ಪ ಭೀಮಯ್ಯ, ಎನ್.ಸಿ.ಸಿ.ಯಲ್ಲಿ ವಶಿನ್ ಮುತ್ತಮ್ಮ, ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಡಿಗ್ರಿ, ವೃತ್ತಿಪರ ಮಾಸ್ಟರ್ ಡಿಗ್ರಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಗೌರವಿಸಲಾಯಿತು.
ಕೆದಮುಳ್ಳೂರು ಗ್ರಾಮದ ಕುಟುಂಬದ ಕೈಮರದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಒಕ್ಕೂಟದ ಮಾಳೇಟಿರ ಎಂ. ಗಣಪತಿ, ಎಂ. ವಿಜಯ ಮಂದಣ್ಣ, ಮಾಳೇಟಿರ ಬೆಲ್ಲು ಬೋಪಯ್ಯ, ಎಂ.ಎಂ. ನಂಜಪ್ಪ ಮತ್ತಿತರರು ಹಾಜರಿದ್ದರು.