ಕೂಡಿಗೆ, ಡಿ. 21: ಪ್ರಚಲಿತ ಸಾಮಾಜಿಕ ವ್ಯವಸ್ಥೆಯಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಅವಕಾಶ ನೀಡಬೇಕಾದ ಸಂದರ್ಭ ಒದಗಿಬಂದಿದೆ ಎಂದು ಕೊಡಗು ಹಾಸನ ಸಾವಯವ ಕೃಷಿ ಕೃಷಿ ಒಕ್ಕೂಟದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಪ್ರಕಾಶ್ ಹೇಳಿದರು. ಸಮೀಪದ ಶಿರಂಗಾಲದ ಮೂಡಲಕುಪ್ಪೆ ಗ್ರಾಮದಲ್ಲಿ ಸಾವಯವ ಕೃಷಿ ಉತ್ಪನ್ನಗಳ ತರಬೇತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿ, ರಾಸಾಯನಿಕ ಗೊಬ್ಬರಗಳನ್ನು ಬಳಸಿ ಕೊಂಡು ಒಂದೆಡೆ ಭೂಮಿ ಮತ್ತೊಂದೆಡೆ ಅಲ್ಲಿ ಬರುವ ಬೆಳೆಗಳನ್ನು ಬಳಸುವದರ ಮೂಲಕ ಅನೇಕ ರೋಗಗಳಿಗೆ ತುತ್ತಾಗುವ ಅವಕಾಶಗಳಿವೆ ಆದ್ದರಿಂದ ಸಾವಯವ ಕೃಷಿ ಮೂಲಕ ಬೆಳೆದ ಉತ್ಪನ್ನಗಳನ್ನು ಬಳಸುವದರಿಂದ ಆರೋಗ್ಯ ಮತ್ತು ಕೃಷಿ ಭೂಮಿ ನಾಶವಾಗುವದನ್ನು ತಪ್ಪಿಸಬಹುದು ಎಂದು ಕೊಡಗು-ಹಾಸನ ಸಾವಯವ ಒಕ್ಕೂಟದ ಕಾರ್ಯ ನಿರ್ವಾಣಾಧಿಕಾರಿ ಬಿ.ಸಿ. ಜಯಪ್ರಸಾದ್ ಹೇಳಿದರು.

ಈಗಾಗಲೇ ಕುಶಾಲನಗರದ ರೈತ ಸಂಪರ್ಕ ಕೇಂದ್ರದ ಸಮೀಪದಲ್ಲಿ ಸಾವಯವ ಆಹಾರ ಉತ್ಪನ್ನಗಳ ಮಾರಾಟ ಮಳಿಗೆಯನ್ನು ತೆರೆಯಲಾಗಿದೆ. ಈ ಮಳಿಗೆಯಲ್ಲಿ ಸಿಗುವ ಸಾವಯವ ಕೃಷಿ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ ಸಾವಯವ ಕೃಷಿಯಲ್ಲಿ ಬೆಳೆದ ಎಲ್ಲ ಬೆಳೆ ಪದಾರ್ಥಗಳನ್ನು ಈ ಸಂಸ್ಥೆಯಲ್ಲಿ ಪಡೆದುಕೊಳ್ಳಲು ಅವಕಾಶಗಳಿವೆ ಎಂದರು ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ, ಕೂರ್ಗ್ ಆಗ್ರ್ಯಾನಿಕ್ ಕೇಂದ್ರದಲ್ಲಿ ಪ್ರತಿಯೊಬ್ಬರಿಗೂ ಬೇಕಾಗುವ ಸಾವಯವ ಕೃಷಿಯ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು ಅವುಗಳನ್ನು ಬಳಸಿಕೊಳ್ಳುವದರ ಮೂಲಕ ಆರೋಗ್ಯ ಸುಧಾರಣೆ ಮಾಡಿಕೊಳ್ಳಲು ಅವಕಾಶವಿದೆ.

ಸಭೆಯಲ್ಲಿ ಶಿರಂಗಾಲ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ಭಾಗವಹಿಸಿದ್ದರು.