ಮಡಿಕೇರಿ, ಡಿ. 22: ಇಂದು ಹಗಲು ವೇಳೆ ಆಗಸದೊಳು ಹೆಲಿಕಾಪ್ಟರ್‍ವೊಂದು ಹಾರಾಡುವ ಮೂಲಕ ಅರೆಕ್ಷಣ ನಗರ ನಿವಾಸಿಗಳಲ್ಲಿ ಕುತೂಹಲ ಮೂಡಿಸುವದರೊಂದಿಗೆ; ಇಲ್ಲಿನ ಗಾಲ್ಫ್ ಮೈದಾನದ ಹೆಲಿಪ್ಯಾಡ್‍ನಲ್ಲಿ ಭೂಸ್ಪರ್ಶಮಾಡಿತು.

ಹಠಾತ್ ಮಡಿಕೇರಿಗೆ ಆಗಮಿಸಿದ ಗಣ್ಯರು ಯಾರಿರಬಹುದೆಂಬ ಕುತೂಹಲ ‘ಶಕ್ತಿ’ಗೂ ಎದುರಾಯಿತು. ಆ ಬಗ್ಗೆ ಮಾಹಿತಿ ತಿಳಿಯಲಾಗಿ, ಹೈದರಾಬಾದ್‍ನ ನವಯುಗ ಇಂಜಿನಿಯರಿಂಗ್ ಖಾಸಗಿ ಸಂಸ್ಥೆ ಉದ್ಯಮಿ ಸಿ. ಶ್ರೀಧರ್ ಎಂಬವರು ತಮ್ಮ ಸ್ವಂತ ಹೆಲಿಕಾಪ್ಟರ್‍ನಲ್ಲಿ ಪರಿಚಿತ ಬಂಧುವೊಬ್ಬರ ವಿವಾಹದಲ್ಲಿ ಭಾಗವಹಿಸಲು ಇತ್ತ ಆಗಮಿಸಿರುವರೆಂಬದು ಖಾತರಿಯಾಯಿತು. -ಟಿ.ಜಿ. ಸತೀಶ್