ವೀರಾಜಪೇಟೆ, ಡಿ. 22: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಅಯ್ಯಪ್ಪ ವೃತಾಧಾರಿಗಳಿಂದ ತಾ. 27ರಂದು ಮಂಡಲ ಪೂಜೆ ನಡೆಯಲಿದೆ. ಮಂಡಲ ಪೂಜೆ ಪ್ರಯುಕ್ತ ಅಂದು ಬೆಳಗ್ಗಿನಿಂದಲೇ ಅಯ್ಯಪ್ಪನಿಗೆ ಪೂಜೆ ಸಾಂಪ್ರÀದಾಯಿಕ ವಿಧಿ ವಿಧಾನಗಳು ನಡೆಯಲಿದೆ. ಅಪರಾಹ್ನ 4ಗಂಟೆಗೆ ವ್ರತಧಾರಿ ಭಕ್ತಾದಿಗಳಿಂದ ಅಭಿಷೇಕ, ಪಡಿಪೂಜೆ, ಮಂಡಲಪೂಜೆ ರಾತ್ರಿ 7ಗಂಟೆಗೆ ಮಹಾಪೂಜಾ ಸೇವೆ ನಂತರ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅಯ್ಯಪ್ಪ ಸ್ವಾಮಿ ವ್ರತಧಾರಿಗಳ ವೃಂದ ತಿಳಿಸಿದೆ.