ಮಡಿಕೇರಿ, ಡಿ.22 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮಾದಾಪುರ ಕೊಡವ ಸಮಾಜದ ಸಂಯುಕ್ತಾಶ್ರಯದಲ್ಲಿ ಡಿ.29 ರಂದು ಮಾದಾಪುರ ಕೊಡವ ಸಮಾಜದಲ್ಲಿ “ಏಳ್‍ನಾಡ್‍ರ ಸಾಂಸ್ಕøತಿಕ ಸಂಗಮ” ಕಾರ್ಯಕ್ರಮ ನಡೆಯಲಿದೆ. ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರ ಅಸಹಾಯಕ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮ ಇದಾಗಲಿದೆ ಎಂದು ಅಕಾಡೆಮಿ ಸದಸ್ಯ ಹಾಗೂ ಕಾರ್ಯಕ್ರಮದ ಸಂಚಾಲಕ ಹಂಚೆಟ್ಟಿರ ಮನುಮುದ್ದಪ್ಪ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾದಾಪುರದಲ್ಲಿ ನಡೆಯುವ “ಸಾಂಸ್ಕøತಿಕ ಸಂಗಮ” ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಬೆಳಗ್ಗೆ 9 ಗಂಟೆಗೆ ಮಾದಾಪುರ ವಿ.ಎಸ್.ಎಸ್.ಎನ್ ಬ್ಯಾಂಕ್ ನಿಂದ ಮಾದಾಪುರ ಕೊಡವ ಸಮಾಜದವರೆಗೆ ಮೆರವಣಿಗೆ ನಡೆಯಲಿದ್ದು, ಈ ಮೆರವಣಿಗೆಯಲ್ಲಿ ಏಳ್ ನಾಡಿಗೆ ಸೇರಿದ ಏಳ್ ದುಡಿಕೊಟ್ಟು ಪಾಟ್ ತಂಡಗಳು ಹಾಗೂ ಕೊಡವ ಕಲಾ ತಂಡಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಮತ್ತು ಅಭಿಮಾನಿ ಬಳಗ ಪಾಲ್ಗೊಳ್ಳಲಿದೆ.
ಬೆಳಗ್ಗೆ 10.30 ಗಂಟೆಗೆ ಮಾದಾಪುರ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಜಯಮಾಲ ಅವರು ನೆರವೇರಿಸಲಿ ದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪ್ರವಾಸೋದ್ಯಮ, ರೇಷ್ಮೆ ಇಲಾಖೆ ಮತ್ತು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಮಡಿಕೇರಿ ಶಾಸಕ ಮಂಡೇಪಂಡ ಪಿ. ಅಪ್ಪಚ್ಚುರಂಜನ್, ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಶಾಂತೆಯಂಡ ವೀಣಾ ಅಚ್ಚಯ್ಯ, ಕೊಡಗು ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್, ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್, ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯು ಕುಮಾರ್, ಮಾದಾಪುರ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಮನು ಮೇದಪ್ಪ, ಸ್ಥಾಪಕ ಅಧ್ಯಕ್ಷ ಮಂಡೇಟಿರ ಎ.ಪೊನ್ನಪ್ಪ ಬೆಂಗಳೂರಿನ ಸಮಾಜ ಸೇವಕÀ ಮಂಡೀರ ಬೋಪಯ್ಯ ಪಾಲ್ಗೊಳ್ಳಲಿದ್ದಾರೆ.
“ಏಳ್‍ನಾಡ್”ರ ಬಗ್ಗೆ ಚಾಮೇರ ದಿನೇಶ್ ವಿಚಾರ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಏಳ್‍ನಾಡ್‍ಗೆ ಸೇರಿದ ಸಾಧಕರನ್ನು, ಅಲ್ಲದೆ ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಲಾಗುವದು.
ಇದೇ ಆಗಸ್ಟ್‍ನಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ ಕೆಲಸ ಮಾಡಿದ ಹಾಗೂ ನೊಂದ ಸಂತ್ರಸ್ತರಿಗೆ ಹಣಕಾಸು, ಆಹಾರ ಪದಾರ್ಥಗಳ ನೆರವು ನೀಡಿದ ಮತ್ತು ವಸ್ತುಗಳನ್ನು ಪೂರೈಸಿದ ಸ್ವಯಂ ಸೇವಕರಿಗೆ ಹಾಗೂ ವಿಕೋಪದ ಸಂದರ್ಭ ಶ್ರಮವಹಿಸಿ ಸಂತ್ರಸ್ತರನ್ನು ರಕ್ಷಿಸಲು ಕೈಜೋಡಿಸಿದ ಹತ್ತು ಮಂದಿ ಪತ್ರಕರ್ತರನ್ನು ಕೂಡ ಸನ್ಮಾನಿಸಿ “ಕೊಡಗ್‍ರ ವೀರ” ಎಂಬ ಬಿರುದನ್ನು ನೀಡಿ ಗೌರವಿಸಲಾಗುವದು. ಏಳ್‍ನಾಡ್ ಕಲಾತಂಡಗಳಿಂದ ಕೊಡವ ಆಟ್-ಪಾಟ್ ಪ್ರದರ್ಶನ ಕಾರ್ಯಕ್ರಮ ನಡೆಯಲಿದ್ದು, ಈ ತಂಡಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವ ಧನವನ್ನು ನೀಡಲಾಗುವದು ಎಂದರು.
ಪುಸ್ತಕ ಅನಾವರಣ
ಸಾಂಸ್ಕøತಿಕ ಸಂಗಮ ಕಾರ್ಯಕ್ರಮದ ಸಂದರ್ಭ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಕೊಡವ ತ್ರೈಮಾಸಿಕ ಪುತ್ತರಿ ಸಂಚಿಕೆ ‘ಪೊಂಗುರಿ’, ಉಳುವಂಗಡ ಕಾವೇರಿ ಉದಯ ಅವರು ರಚಿಸಿರುವ ‘ಭೂ ಲೋಕತ್‍ರ ಜನ್ಮ’, ಚೊಟ್ಟೆಯಂಡ ಮಾಡ ಲಲಿತ ಕಾರ್ಯಪ್ಪ ಬರಿದಿರುವ ‘ಒರೇ ಬಳ್ಳಿರ ಪೂ’ ಕೃತಿಯನ್ನು ಅನಾವರಣ ಮಾಡಲಾಗುತ್ತದೆ ಎಂದು ಮನುಮುದ್ದಪ್ಪ ತಿಳಿಸಿದರು.
ಸಚಿವರಿಗೆ ಮನವಿ
ಅಕಾಡೆಮಿ ಸದಸ್ಯ ಬೊಳ್ಳಜ್ಜಿರ ಅಯ್ಯಪ್ಪ ಅವರು ಮಾತನಾಡಿ, ಸಾಂಸ್ಕøತಿಕ ಸಂಗಮದಲ್ಲಿ ಏಳ್‍ನಾಡಿಗೆ ಸೇರಿದಂತಹ 7 ಕಲಾತಂಡಗಳಿಂದ ಕೊಡವ ಆಟ್-ಪಾಟ್ ಪ್ರದರ್ಶನ ಕಾರ್ಯಕ್ರಮವು ನಡೆಯಲಿದೆ. ಆದರೆ, ಇದಕ್ಕೂ ಪ್ರಮುಖವಾಗಿ ಪ್ರಾಕೃತಿಕ ವಿಕೋಪದ ಭೀಕರತೆ, ಅದರಿಂದ ಸಂಭವಿಸಿರುವ ಅನಾಹುತಗಳು ಹಾಗೂ ಸಂತ್ರಸ್ತರ ಸಂಕಷ್ಟದ ಬಗ್ಗೆ ಸಮಾರಂಭಕ್ಕೆ ಆಗಮಿಸುವ ಸಚಿವರು ಗಳಿಗೆ ಮನದಟ್ಟು ಮಾಡಿಕೊಡ ಲಾಗುವದು. ಪರಿಹಾರ ಕಾರ್ಯ ಗಳನ್ನು ಆದಷ್ಟು ಚುರುಕು ಗೊಳಿಸಬೇಕು ಸೇರಿದಂತೆ ಸಂತ್ರಸ್ತರ ಪರವಾದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಚಿವರುಗಳಿಗೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತ ನಾಡಿ, ಸಂತ್ರಸ್ತರು ಎದುರಿಸುತ್ತಿರುವ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ, ನಿಧಾನ ಗತಿಯಲ್ಲಿ ಸಾಗುತ್ತಿರುವ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸು ವಂತೆ ಆಡಳಿತ ವ್ಯವಸ್ಥೆಯ ಮೇಲೆ ಒತ್ತಡ ಹೇರುವದು ಸಾಂಸ್ಕøತಿಕ ಸಂಗಮದ ಉದ್ದೇಶವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯ ಹಾಗೂ ಮಾದಾಪುರ ಕೊಡವ ಸಮಾಜದ ಗೌರವ ಕಾರ್ಯದರ್ಶಿ ನಾಗಂಡ ಸಚಿ ಕಾಳಪ್ಪ ಉಪಸ್ಥಿತರಿದ್ದರು.