ಕೂಡಿಗೆ, ಡಿ. 22: ಸೋಮವಾರಪೇಟೆ ತಾಲೂಕು ತೋಟಗಾರಿಕೆ ಇಲಾಖೆಯ ವತಿಯಿಂದ ರೈತರಿಗೆ ತೋಟಗಾರಿಗೆ ಬೆಳೆಯ ಬಗ್ಗೆ ಕಾರ್ಯಾಗಾರವನ್ನು ಹಮ್ಮಿ ಕೊಳ್ಳಲಾಯಿತು.

ಅಧ್ಯಕ್ಷತೆಯನ್ನು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ರಮೇಶ್ ವಹಿಸಿದ್ದರು. ತಂಬಾಕು ಬೆಳೆ ಬೆಳೆಯುವ ರೈತರು ಅದರ ಬದಲಾಗಿ ತೋಟಗಾರಿಕಾ ಬೆಳೆಗಳನ್ನು ಬೆಳೆಯುವ ಬಗ್ಗೆ ಮಾಹಿತಿ ನೀಡಿದರು. ತಂಬಾಕು ಬೆಳೆಯಿಂದ ಅಗುವ ಪರಿಣಾಮವನ್ನು ತೋಟಗಾರಿಕಾ ವಿಜ್ಞಾನಿಗಳಾದ ನಾಚಪ್ಪ, ರಮೇಶ್ ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ತಂಬಾಕು ಮಂಡಳಿ ಅಧಿಕಾರಿ ಪಾಟೀಲ್ ಸೇರಿದಂತೆ ರೈತರು ಭಾಗವಹಿಸಿದ್ದರು.