ಮೂರ್ನಾಡು, ಡಿ. 22: ಮೂರ್ನಾಡಿನ ಪದವಿ ಕಾಲೇಜಿನಲ್ಲಿ ತಾ. 26ರಂದು ಮಧ್ಯಾಹ್ನ 1.45ಕ್ಕೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕಾಗಿ ದೃಷ್ಠಿಕೋನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ವೈದ್ಯಕೀಯ ಬರಹದ ಕಾರ್ಯಧಿಕಾರಿಯಾಗಿರುವ ದಿವ್ಯ ಬಿ.ಪಿ. ‘ಎಫೆಟ್ವಿವ್ ಬಿಸಿನೆಸ್ ಕಮ್ಯೂನಿಕೇಷನ್’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಆಸಕ್ತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಬಹುದೆಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ತಿಳಿಸಿದ್ದಾರೆ.