ಮಡಿಕೇರಿ, ಡಿ. 22: ಬೈಕ್ ಅವಘಡಕ್ಕೀಡಾಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ನಗರದ ಕಾನ್ವೆಂಟ್ ಜಂಕ್ಷನ್ ಸಮೀಪ ನಡೆದಿದೆ.

ರಾಣಿಪೇಟೆಯ ನಿವಾಸಿ ಮುಬಾರಕ್ ಎಂಬವರ ಪುತ್ರ ಮುಸ್ತಫ (21) ಇಂದು ಅತೀವೇಗವಾಗಿ ತೆರಳುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯಿದ್ದ ಮರವೊಂದಕ್ಕೆ ಅಪ್ಪಳಿಸಿದ್ದು, ಮುಸ್ತಫ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮುಸ್ತಫ ಮಾಂಸದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.