ಕೂಡಿಗೆ, ಡಿ. 22: ಮುಳ್ಳುಸೋಗೆ ಗ್ರಾಮ ಪಂಚಾಯತಿಯ ಮಾಸಿಕ ಸಭೆಯು ಇಂದು ನಿಗಧಿಯಾಗಿತು. ಅದರೆ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಳ್ಳುವ ಸಂದರ್ಭದಲ್ಲಿ ಹಾಜುರಿದ್ದ 20 ಸದಸ್ಯಗಳಲ್ಲಿ 11 ಸದಸ್ಯರು ಅಧ್ಯಕ್ಷೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿ ಸಭೆÀಯಿಂದ ಹೊರ ನಡೆದರು. ಇದರಿಂದಾಗಿ ಮುಂದೂಡಲ್ಪಟ್ಟ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಹಾಜುರಿದ್ದ ಸದಸ್ಯರುಗಳು ಮಾಸಿಕ ಸಭೆಯು ಇದೇ ರೀತಿ ಮುಂದೂಡಲ್ಪಟ್ಟಿತ್ತು. ಈ ರೀತಿ ಸಭೆಗಳು ಮುಂದೂಡಲ್ಪಟ್ಟರೆ ಗ್ರಾಮ ಪಂಚಾಯಿತಿ ಕಾಮಗಾರಿಗಳ ಪ್ರಗತಿ ಹೇಗೆ ಎಂಬದು ಗ್ರಾಮಸ್ಥರ ಪ್ರಶ್ನೆಯಾಗಿದೆ.