ವೀರಾಜಪೇಟೆ, ಡಿ. 22: ನಗರದಲ್ಲಿ ಅರಂಭವಾಗುವ ಚೊಚ್ಚಲ ವೀರಾಜಪೇಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಅಟಗಾರರು ಇಂದು ನಗರದ ಮುಖ್ಯ ಬೀದಿಗಳಲ್ಲಿ ಮೇರವಣಿಗೆ ಮಾಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು.
ವೀರಾಜಪೇಟೆ ನಗರದ ಯೂತ್ ಫ್ರೆಂಡ್ಸ್ ಸಂಸ್ಥೆಯ ವತಿಯಿಂದ ಅಯೋಜಿಸಲಾಗುತ್ತಿರುವ ನಗರಕ್ಕೆ ಸೀಮಿತವಾಗುವಂತೆ ಪ್ರಥಮ ಬಾರಿಗೆ ಐ.ಪಿ.ಎಲ್ ಮಾದರಿಯ ವಿ.ಪಿ.ಎಲ್ ಕ್ರಿಕೆಟ್ ನಗರದ ಸಂತ ಅನ್ನಮ್ಮ ಶಾಲೆಯ ಮೈದಾನದಲ್ಲಿ ತಾ. 23 ರಿಂದ ಅರಂಭವಾಗುವದರಿಂದ ಇಂದು ಪಂದ್ಯಾಟವನ್ನು ಪ್ರಚಾರ ಪಡಿಸಲು ಮತ್ತು ನಗರವಾಸಿಗಳಿಗೆ ಅಟಗಾರರ ಪರಿಚಯಿಸುವ ನಿಟ್ಟಿನಲ್ಲಿ ಅಟಗಾರರನ್ನು ಬೀಟ್ ಮೂಲಕ ಖರೀದಿಸಿದ್ದ ಪ್ರತಿಷ್ಠಿತ 10 ತಂಡಗಳು ಇಂದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ತೆಲುಗರ ಬೀದಿ ಮಾರಿಯಮ್ಮ ದೇವಾಲಯದ ಮುಂಭಾಗದಿಂದ ಪಟ್ಟಣ ಪಂಚಾಯಿತಿಯ ಸದಸ್ಯರಾದ ಡಿ.ಪಿ. ರಾಜೇಶ್ ಪದ್ಮಾನಾಭ ಮೆರವಣಿಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಪಂದ್ಯಾಟವನ್ನು ಅಯೋಜಿಸುತ್ತಿರುವ ಅಭಿಲಾಶ್, ನಿತೀನ್ (ಲೇಪು), ಇಮ್ತಿಯಾಜ್ ಮತ್ತು ಶವಾಜ್ ಮತ್ತು 10 ತಂಡಗಳ ಮಾಲೀಕರು ವ್ಯವಸ್ಥಾಪಕರು, ತಂಡಗಳ ತರಬೇತುದರಾರು ಮತ್ತು ತಂಡಗಳ ಅಟಗಾರರು ಹಾಜರಿದ್ದರು. ಪಂದ್ಯಾ ಟವು ತಾ.23 ರಿಂದ ಅರಂಭವಾಗಿ ತಾ.26ರವರೆಗೆ ನಡೆಯಲಿದೆ.