ಕುಶಾಲನಗರ, ಡಿ.22: ವಾಹನವೊಂದರಲ್ಲಿ ಒಯ್ಯಲಾಗುತ್ತಿದ್ದ ಸರಕು ಸಾಮಗ್ರಿಗಳು ಏಕಾಏಕಿ ಹಿಂಬದಿಯಲ್ಲಿ ಬರುತ್ತಿದ್ದ ಕಾರೊಂದರ ಮೇಲೆ ಬಿದ್ದ ಹಿನ್ನೆಲೆಯಲ್ಲಿ ಸ್ವಲ್ಪಕಾಲ ಕುಶಾಲನಗರ ಪಟ್ಟಣದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಶನಿವಾರ ಸಂಜೆ ನಡೆಯಿತು.
ಕುಶಾಲನಗರ ಪಟ್ಟಣದ ಮೈಸೂರು ರಸ್ತೆಯಲ್ಲಿ ಅಲುಮಿನಿಯಂ ಸರಂಜಾಮುಗಳನ್ನು ಹೊತ್ತೊಯ್ಯುತ್ತಿದ್ದ ಗೂಡ್ಸ್ ಆಟೋ ದಿಢೀರನೆ ಬ್ರೇಕ್ ಹಾಕಿದ ಸಂದರ್ಭ ಅದರಲ್ಲಿ ತುಂಬಿದ್ದ ಸರಂಜಾಮುಗಳು ಹಿಂದಿನಿಂದ ಬರುತ್ತಿದ್ದ ಕಾರೊಂದರ ಮೇಲೆ ಜಾರಿ ಬಿದ್ದಿದೆ. ಅದೃಷ್ಟವಶಾತ್ ಯಾವದೇ ರೀತಿಯ ಅಪಾಯ ಉಂಟಾಗಿಲ್ಲ.