*ಗೋಣಿಕೊಪ್ಪಲು, ಜ. 9: ನೃತ್ಯ, ಸಂಗೀತ, ನಾಟಕ, ಅನುಕರಣೆ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆ (ಕಾಪ್ಸ್) ವಾರ್ಷಿಕೋತ್ಸವ ಸಮಾರಂಭ ಕಂಗೊಳಿಸಿತು.

ಕನ್ನಡ, ಹಿಂದಿ, ಜಾನಪದ ಗೀತೆಗಳಿಗೆ ನೃತ್ಯ ಮಾಡಿದ ವಿದ್ಯಾರ್ಥಿಗಳು ನೆರೆದಿದ್ದ ಪ್ರೇಕ್ಷರನ್ನು ರಂಜಿಸಿದರು. ದೇಶಭಕ್ತಿಗೀತೆ ನೃತ್ಯ ಸುಂದರವಾಗಿ ಮೂಡಿಬಂದವು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮೊದಲಾದವು ಶಿಸ್ತುಬದ್ಧವಾಗಿ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಅಂತರರಾಷ್ಟ್ರೀಯ ಅಥ್ಲೆಟ್ ಅರ್ಜುನ್ ದೇವಯ್ಯ ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚಿನ ಜ್ಞಾನ ಪಡೆದುಕೊಳ್ಳಬಹುದು. ಆದರೆ ಈ ಜಾಲತಾಣದ ಬಗ್ಗೆ ಎಚ್ಚರದಿಂದ ಇರಬೇಕು. ತಪ್ಪಿದರೆ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಂದು ಹೇಳಿದರು. ಪ್ರಾಂಶುಪಾಲ ಬೆನ್ನಿ ಕುರಿಯಾಸ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚಿನ ಓದು ಅಗತ್ಯ. ವಿದ್ಯಾರ್ಥಿಗಳು ಸಮಯಪ್ರಜ್ಞೆ ಬೆಳೆಸಿಕೊಂಡು ಓದಿನ ಕಡೆಗೆ ಗಮನಹರಿಸಬೇಕು ಎಂದರು.

ಆಡಳಿಯ ಮಂಡಳಿ ಅಧ್ಯಕ್ಷ ಎಂ.ಎಂ. ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲೆ ವಿಜಯಲಕ್ಷ್ಮಿ ಹಾಜರಿದ್ದರು.