ಮಡಿಕೇರಿ, ಜ. 9: ಅಖಿಲ ಭಾರತ ಸಾಹಿತ್ಯ ಪರಿಷತ್‍ನ ಮಾಸಿಕ ಕಾರ್ಯಕ್ರಮದ ಅಂಗವಾಗಿ ಸಭೆ ಭಾರತೀಯ ವಿದ್ಯಾಭವನದ ಡ್ರಾಯಿಂಗ್ ಕೊಠಡಿಯಲ್ಲಿ ನಡೆಯಿತು. ಅ.ಭಾ.ಸಾ.ಪ. ಮಡಿಕೇರಿ ನಗರದ ಅಧ್ಯಕ್ಷೆ ಅಂಬೆಕಲ್ಲು ಸುಶೀಲ ಕುಶಾಲಪ್ಪ ‘ಗೀತೆ ರೂಪದಲ್ಲಿ ರಾಮ ಪ್ರಸಂಗಗಳು’ ಎಂಬ ವಿಚಾರದ ಮೇಲೆ ಸೀತಾ ಮಾತೆಯ ಜನ್ಮಾದರಿತ ಪ್ರಸಂಗಗಳನ್ನು ಮತ್ತು ಸಂಪೂರ್ಣ ರಾಮಾಯಣವನ್ನು ಕುರುಕ್ಷೇತ್ರದ ಕೆಲವು ಆಯ್ದ ಭಾಗಗಳನ್ನು ಜನಪದ ಶೈಲಿಯಲ್ಲಿ ಪರಿಚಯಿಸಿದರು. ಅ.ಭಾ.ಸಾ.ಪ. ವತಿಯಿಂದ ನಡೆದ ಚಿತ್ರಕಲಾ ಕಾರ್ಯಕ್ರಮದ ಯಶಸ್ಸನ್ನು ಜಿಲ್ಲಾ ಸಂಚಾಲಕರು ಜಯಕುಮಾರ್ ಹಂಚಿಕೊಂಡರು ಎರಡನೇ ರಾಜ್ಯ ಸಮ್ಮೇಳನದ ಅನುಭವವನ್ನು ಕಸ್ತೂರಿ ಗೋವಿಂದಮ್ಮಯ್ಯ, ಸಚಿನ್ ಹಾಗೂ ಸುನಿಲ್ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಬೈತಡ್ಕ ಜಾನಕಿ ಬೆಳ್ಳಿಯಪ್ಪ, ರಮೇಶ್ ಗುಡ್ಡೆಮನೆ, ಭಾರತೀ ರಮೇಶ್, ಎನ್. ಟಿ. ಶಂಕರನಾರಾಯಣ, ಗೌರಮ್ಮ ಮಾದಮಯ್ಯ, ಪ್ರಸನ್ನ ಕುಮಾರ್, ತಮ್ಮಯ್ಯ, ವಸಂತ್ ಭಾಗವಹಿಸಿದ್ದರು. ಸಚಿನ್ ಗೌಡ ಸ್ವಾಗತಿಸಿ, ವಂದಿಸಿದರು. ಮುಂದಿನ ಸಭೆ ಫೆ. 7 ರಂದು ಜನಪದ ಸಾಹಿತ್ಯ ಮತ್ತು ಸೋಬಾನೆ ಎಂಬ ವಿಷಯದಡಿ ನಡೆಯಲಿದೆ.