ವೀರಾಜಪೇಟೆ, ಜ. 9: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ವಿಭಾಗದಿಂದ ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕಿ ಬಬ್ಬೀರ ಸರಸ್ವತಿ ಆಗಮಿಸಿದ್ದರು.

ಈ ಸಂದರ್ಭ ಮಾತನಾಡಿದ ಅವರು, ನಾವು ಬದುಕಬೇಕು ಬೇರೆಯವರನ್ನು ಬದುಕಲು ಬಿಡಬೇಕು. ಸಾಮಾಜಿಕವಾಗಿ ನಡೆಯುವ ಎಲ್ಲಾ ಚಟುವಟಿಕೆಗಳು ಇಂದು ವ್ಯವಹಾರವಾಗಿದೆ. ಸಮಾಜವನ್ನು ಬದಲಾಯಿಸಲು ನಾವು ಮುಂದಾಗಬೇಕು ಸ್ವಾಭಿಮಾನಿಗಳಾಗಿ ಬಾಳಬೇಕು ನಮ್ಮ ಮನಸ್ಸು ಬೇರೆಯವರ ಕಷ್ಟಕ್ಕೆ ಮರುಗಿ ಹಾತೊರೆಯಬೇಕು. ವೃತ್ತಿ ಯಾವದೇ ಆದರೂ ವೃತ್ತಿ ಮಾರಾಟ ಮಾಡಬೇಡಿ ನ್ಯಾಯಕ್ಕಾಗಿ ದುಡಿಯುವವರಾಗಬೇಕು ಎಲ್ಲಾರು ಸಮಾನರು ಎಂಬ ಬಾವನೆ ನಮ್ಮಲ್ಲಿ ಮೂಡಬೇಕು ಎಂದರು.

ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ಉಪನ್ಯಾಸಕಿ ಗಾಯತ್ರಿ ಆಯೋಜಿಸಿದ್ದರು. ತೃತೀಯ ಬಿ.ಎ ವಿದ್ಯಾರ್ಥಿ ಶಿನೋಜ್ ಸ್ವಾಗತಿಸಿ, ಲಕ್ಷ್ಮೀ ವಂದಿಸಿದರು. ಈ ಸಂದರ್ಭ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.