ಶಬರಿಮಲೆ, ಜ. 12: ಮಕರ ಸಂಕ್ರಮಣದಲ್ಲಿ ಕೇರಳದ ಶಬರಿಮಲೆಯಲ್ಲಿ ಜರುಗುವ ಶ್ರೀ ಅಯ್ಯಪ್ಪ ಮಕರ ಜ್ಯೋತಿಯ ದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಉಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರಕ್ಕೆ ಅಯ್ಯಪ್ಪ ಭಕ್ತರ ಆಗಮನದ ಸಂಖ್ಯೆಯಲ್ಲಿ ಇಳಿಮುಖಗೊಂಡಿದೆ.
ಪ್ರವಾಹದಿಂದಾಗಿ ಪಂಪಾ ಕ್ಷೇತ್ರ ಕೊಚ್ಚಿ ಹೋಗಿರುವದರಿಂದ ಭಕ್ತರಿಗೆ ಉಳಿದುಕೊಳ್ಳಲು ಸ್ಥಳಾವಕಾಶವಿಲ್ಲದೆ ತಾತ್ಕಾಲಿಕ ಶೀಟ್‍ಗಳನ್ನು ಅಳವಡಿಸಿರುವ ಟೆಂಟ್‍ಗಳಲ್ಲಿ ತಂಗುವಂತಾಗಿದೆ. ಇತ್ತ ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರಿಗಿಂತ ಹೆಚ್ಚಾಗಿ ಪೊಲೀಸ್, ಸೇನಾ ತುಕಡಿಗಳ ಭದ್ರತಾ ಸಿಬ್ಬಂದಿಗಳೇ ಹೆಚ್ಚಾಗಿ ಕಾಣಸಿಗುತ್ತಾರೆ.
ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶಕ್ಕೆ ನ್ಯಾಯಾಲಯ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಉಂಟಾಗುತ್ತಿರುವ ಗಲಾಟೆ ಯಿಂದಾಗಿ ಪುಣ್ಯ ಕ್ಷೇತ್ರದಲ್ಲಿ ವ್ರತಧಾರಿ ಭಕ್ತರಿಗಿಂತ ಸಮವಸ್ತ್ರಧಾರಿ ಪೊಲೀಸರ ಸಂಖ್ಯೆ ಹೆಚ್ಚಾಗಿದೆ.
ಪ್ರತ್ಯಕ್ಷ ವರದಿ: ಕುಡೆಕಲ್ ಗಣೇಶ್