ಮಡಿಕೇರಿ, ಜ. 12: ವಿದ್ಯಾರ್ಥಿಗಳ ಸಹಿತ ಎಲ್ಲ ಯುವ ಜನತೆ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಮೈಗೂಡಿಸಿ ಕೊಂಡು ಆದರ್ಶ ಜೀವನ ರೂಪಿಸಿ ಕೊಳ್ಳುವ ಮೂಲಕ ಅಪರಾಧ ಚಟುವಟಿಕೆಗಳಿಂದ ದೂರವಿರ ಬೇಕೆಂದು; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಕರೆ ನೀಡಿದರು. ನಗರದ ಸರಕಾರಿ ಪ.ಪೂ. ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಯುವ ಸಮೂಹ ಗುರುಹಿರಿಯ ರನ್ನು ಗೌರವಿಸುವದು ಸೇರಿದಂತೆ ವಿವೇಕಾನಂದರಂತೆ ಯಾವದೇ ಸಂಶಯಗಳ ಬಗ್ಗೆ ಧೈರ್ಯವಾಗಿ ಪ್ರಶ್ನಿಸುವ ಮೂಲಕ ಸತ್ಯವನ್ನು ತಿಳಿದುಕೊಳ್ಳಲು ಮುಂದಾಗಬೇಕೆಂದು ಮಡಿಕೇರಿ, ಜ. 12: ವಿದ್ಯಾರ್ಥಿಗಳ ಸಹಿತ ಎಲ್ಲ ಯುವ ಜನತೆ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಮೈಗೂಡಿಸಿ ಕೊಂಡು ಆದರ್ಶ ಜೀವನ ರೂಪಿಸಿ ಕೊಳ್ಳುವ ಮೂಲಕ ಅಪರಾಧ ಚಟುವಟಿಕೆಗಳಿಂದ ದೂರವಿರ ಬೇಕೆಂದು; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಕರೆ ನೀಡಿದರು. ನಗರದ ಸರಕಾರಿ ಪ.ಪೂ. ಕಾಲೇಜಿನಲ್ಲಿ ವಿವೇಕಾನಂದ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಯುವ ಸಮೂಹ ಗುರುಹಿರಿಯ ರನ್ನು ಗೌರವಿಸುವದು ಸೇರಿದಂತೆ ವಿವೇಕಾನಂದರಂತೆ ಯಾವದೇ ಸಂಶಯಗಳ ಬಗ್ಗೆ ಧೈರ್ಯವಾಗಿ ಪ್ರಶ್ನಿಸುವ ಮೂಲಕ ಸತ್ಯವನ್ನು ತಿಳಿದುಕೊಳ್ಳಲು ಮುಂದಾಗಬೇಕೆಂದು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಗೋಳಿಕಜೆ ಧನಂಜಯ್ ಅವರುಗಳು ಮಾತನಾಡಿ, ವಿದ್ಯಾರ್ಥಿ ಗಳು ಸ್ವಾಮೀಜಿ ವಿಚಾರದೊಂದಿಗೆ ರಾಷ್ಟ್ರೀಯ ಏಕತೆ ಸಾಧಿಸುವಂತೆ ಕಿವಿಮಾತು ಹೇಳಿದರು.
ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಸುಕುಮಾರ್ ಪ್ರಾಸ್ತಾವಿಕ ನುಡಿಯೊಂದಿಗೆ, ಪ್ರಾಂಶುಪಾಲ ವಿಜಯಕುಮಾರ್ ದಿನದ ಮಹತ್ವ ಕುರಿತು ನೆನಪಿಸಿದರು. ಯುವ ಒಕ್ಕೂಟ ಪದಾಧಿಕಾರಿಗಳಾದ ನವೀನ್ ದೇರಳ, ಅವಿನ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಧಾ ವಿಜೇತರು: ಯುವ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ಪ.ಪೂ. ಕಾಲೇಜಿನ ಆರ್.ವಿ. ಮದನ್ ಪ್ರಥಮ (ವಾಣಿಜ್ಯ ವಿಭಾಗ), ದ್ವಿತೀಯ ಪ್ರಿಯಧನ್ಯ, ತೃತೀಯ ಆರ್. ಶರತ್ ಪಡೆದುಕೊಂಡರೆ, ಪ್ರಬಂಧ ಸ್ಪರ್ಧೆ ಯಲ್ಲಿ ಟಿ.ಪಿ. ಜಶ್ಮಿತ ಪ್ರಥಮ (ವಾಣಿಜ್ಯ ವಿಭಾಗ), ದ್ವೀತಿಯ ಜಿ. ಸಂಗೀತ, ತೃತೀಯ ಬಹುಮಾನ ಬಿ.ಎಸ್. ಅನುಷಾ ಪಡೆದುಕೊಂಡಿ ದ್ದಾರೆ.
ಅಧ್ಯಯನಕ್ಕೆ ಕರೆ: ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಕೆ.ಸಿ. ದಯಾನಂದ ಮಾತನಾಡುತ್ತಾ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಧ್ಯಯನದೊಂದಿಗೆ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಂಶುಪಾಲೆ ವೈ. ಚೈತ್ರಾ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿವೇಕಾನಂದರ ಕುರಿತು ಜೀವನದಲ್ಲಿ ತಿಳಿದುಕೊಳ್ಳುವದು ಅತ್ಯಂತ ಹೆಮ್ಮೆಯ ವಿಷಯವೆಂದು ನೆನಪಿಸಿದರು. ವಿದ್ಯಾರ್ತಿಗಳು ಇಂತಹ ಮಹಾನ್ ವ್ಯಕ್ತಿಗಳ ಕುರಿತು ಹೆಚ್ಚಿನ ಅಧ್ಯಯನ ದೊಂದಿಗೆ ಒಳ್ಳೆಯ ಮಾರ್ಗದಲ್ಲಿ ಮುನ್ನಡೆಯುವಂತೆ ಸಲಹೆ ನೀಡಿದರು.
‘ಶಕ್ತಿ’ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ದಿನದ ಮಹತ್ವದೊಂದಿಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಅಭಿಪ್ರಾಯ ಮಂಡಿಸಿದರು. ಕಾಲೇಜು ಉಪನ್ಯಾಸ ವೃಂದದೊಂದಿಗೆ ವಿದ್ಯಾರ್ಥಿ ಸಮೂಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.