ಮಡಿಕೇರಿ, ಜ. 12: ನೀಲಮ್ಮ ಪ್ರಕಾಶನ ಸಿಡ್ನಿ, ಆಸ್ಟ್ರೇಲಿಯಾದ ‘ಕತ್ತಲೆಯ ಕಿರಣ’ ಕನ್ನಡ ಕಾದಂಬರಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ತಾ. 13 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಮಡಿಕೇರಿಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪದ ಬಾಲಭವನದಲ್ಲಿ ಏರ್ಪಡಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ನಾಗೇಶ್ ಕಾಲೂರು, ಶ.ಗ. ನಯನತಾರಾ, ನಿವೃತ್ತ ಶಿಕ್ಷಕ ದೇವಜನ ನಾಣಯ್ಯ, ಲೇಖಕ ಐಮಂಡ ಜಗದೀಶ್ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಯಾಲದಾಳು ಮಾದಪ್ಪ ಪಾಲ್ಗೊಳ್ಳಲಿದ್ದಾರೆ.