ಮಡಿಕೇರಿ, ಜ. 12: ಜಿಲ್ಲಾಡಳಿತ, ಪ್ರವಾಸೋದ್ಯಮ, ತೋಟಗಾರಿಕೆ ಹಾಗೂ ಪಶು ಸಂಗೋಪನಾ ಇಲಾಖೆ ಸಹಯೋಗದೊಂದಿಗೆ ಕೊಡಗು ಪುನಶ್ಚೇತನಕ್ಕಾಗಿ ಏರ್ಪಡಿಸಲಾಗಿರುವ ಕೊಡಗು ಪ್ರವಾಸಿ ಉತ್ಸವದಲ್ಲಿ ಸಾಂಸÀ್ಕøತಿಕ ಕಾರ್ಯಕ್ರಮಗಳು ಜನ ಮನ ಸೂರೆಗೊಂಡವು.

ತಾ. 11ರಂದು ನಡೆದ ಕಾರ್ಯಕ್ರಮದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಸಾಂಪ್ರದಾಯಿಕ ಕೋಲಾಟ, ಪರೆಯಕಳಿ, ಚಿಣ್ಣ್‍ಕ್‍ಮಳೆ ಹಾಡಿನ ನೃತ್ಯಗಳು ಕೊಡಗಿನ ಸಂಸ್ಕøತಿಯನ್ನು ಪರಿಚಯಿಸಿದವು.

ಝೀ ಕನ್ನಡ ಸರಿಗಮಪ ಲಿಟ್ಲ್ ಚಾಂಪ್ಸ್ ಖ್ಯಾತಿಯ ಕಲಾವಿದರಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ಮೂಡಿಬಂದವು. ರಾಣೆಬೆನ್ನೂರಿನ ಮಕ್ಕಳ ನೃತ್ಯ ಕಾರ್ಯಕ್ರಮ ಆಕರ್ಷಣೀಯ ವಾಗಿತ್ತು. ನಂತರ ಹಿನ್ನೆಲೆ ಗಾಯಕಿ ಎಂ.ಡಿ. ಪಲ್ಲವಿ ಅವರಿಂದ ಸಂಗೀತ ಸುಧೆ ಹರಿದು ಬಂದಿತು. ಬಹುದೊಡ್ಡ ವೇದಿಕೆಯಲ್ಲಿ ಆಹ್ವಾನಿತ ತಂಡಗಳ ಕಾರ್ಯಕ್ರಮಗಳು ಮೂಡಿಬಂದಿ ತ್ತಾದರೂ ಒಂದಿಷ್ಟು ಅಭಾಸ, ಅವ್ಯವಸ್ಥೆಗಳೂ ನುಸುಳಿಕೊಂಡವು. ಪ್ರವಾಸಿ ಉತ್ಸವದಲ್ಲಿ ಪ್ರವಾಸಿಗರಿಗೆ ಇಲ್ಲಿನ ಸಂಸ್ಕøತಿಯನ್ನು ಪರಿಚಯಿಸುವಲ್ಲಿ ವಿಫಲವಾಯಿತು. ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮವನ್ನು ಖಾಲಿ ಕುರ್ಚಿಗಳಿದ್ದಾಗ ಕೇವಲ ಸಮಯ ಕಳೆಯುವದಕ್ಕಾಗಿ ಪ್ರದರ್ಶನ ಮಾಡಿದಂತಿತ್ತು.

ಆಹ್ವಾನಿತ ಸೆಲಬ್ರಿಟಿಗಳಿಗೆ ಮನ್ನಣೆ ನೀಡಲಾಯಿತಾದರೂ ಮಕ್ಕಳು ನೀಡಿದ ಕಾರ್ಯಕ್ರಮ ಅಷ್ಟಾಗಿ ಚೆನ್ನಾಗಿರಲಿಲ್ಲ. ವೇಷ- ಭೂಷಣ, ನೃತ್ಯಗಳು ಕೊಡಗಿನ ಸ್ಥಳೀಯ ಕಲಾವಿದರಿಗಿಂತಲೂ ಕಳಪೆಯಾಗಿತ್ತು. ಇನ್ನೂ ಖ್ಯಾತ ಹಿನ್ನೆಲೆ ಗಾಯಕಿ ಎಂ.ಡಿ. ಪಲ್ಲವಿ ಅವರಿಗೆ ರಾತ್ರಿ 9.30ರ ಬಳಿಕ ಅವಕಾಶ ನೀಡಿದ್ದು, ಅಷ್ಟರಲ್ಲಾಗಲೇ ಬಹಳಷ್ಟು ಕುರ್ಚಿಗಳು ಖಾಲಿಯಾಗಿದ್ದವು. ಅವರ ಹಾಡು ಕೇಳಲು ಕಲಾಸಕ್ತರಿಲ್ಲದಿದ್ದರೂ, ಪಲ್ಲವಿ ಅವರು ಬೇಸರದಿಂದಲೇ ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಮುಗಿಸಿ ತೆರಳಿದರು. ಅದಕ್ಕಿಂತಲೂ ಹೆಚ್ಚಾಗಿ ಸಂಜೆ 5 ಗಂಟೆಗೆ ಉದ್ಘಾಟನೆ ಗೊಳ್ಳಬೇಕಿದ್ದ ಕಾರ್ಯಕ್ರಮ ಉದ್ಘಾಟನೆಯಾಗಿದ್ದು, ರಾತ್ರಿ 8.30ಕ್ಕೆ, ಅದುವರೆಗೆ ಸಮಯ ತಳ್ಳಿದ್ದರಿಂದ ಬೇಸತ್ತ ಕಲಾಸಕ್ತರು ಅವರವರ ಮನೆ ಸೇರಿಯಾಗಿತ್ತು.

ಕೊನೆಯ ದಿನವಾದ ತಾ. 13 (ಇಂದಾದರೂ) ಕಲೆ, ಸಂಸ್ಕøತಿಯ ಬೀಡಾಗಿರುವ, ಕೊಡಗಿನ ಕಲಾಸಕ್ತರ ಅಭಿರುಚಿಗೆ ತಕ್ಕದಾಗಿ ಕಾರ್ಯಕ್ರಮ ಆಯೋಜಕರು ಕಾರ್ಯಕ್ರಮ ಮಾರ್ಪಡಿಸುವದೊಳಿತೆಂಬ ಭಿನ್ನಹ ಸ್ಥಳೀಯರದ್ದು.