ಶನಿವಾರಸಂತೆ, ಜ. 12: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಗಳಲೆ ಗ್ರಾಮದ ಹೊಸ ಬಡಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನ ರೂ. 3 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುವ ರಸ್ತೆ ಕಾಮಗಾರಿಗೆ ಸದಸ್ಯೆ ಸರೋಜಮ್ಮ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಕೆ. ಸುಮತಿ ಸತೀಶ್, ಸಂತೋಷ್‍ಕುಮಾರ್, ಮಾಜಿ ಸದಸ್ಯೆ ಎಸ್.ಪಿ. ಭಾಗ್ಯ, ಪ್ರಮುಖರಾದ ಜಯಕುಮಾರ್, ಸತೀಶ್, ರವಿಮೇಸ್ತ್ರಿ, ಸುಬ್ಬರಾವ್, ಸೌಮ್ಯ, ಸವಿತಾ ಹಾಗೂ ಗುತ್ತಿಗೆದಾರ ರಾಜೇಂದ್ರ ಹಾಜರಿದ್ದರು.