ಮಡಿಕೇರಿ, ಜ. 23: ತೀವ್ರ ಜಲಸ್ಫೋಟದೊಂದಿಗೆ ಮಳೆಗಾಲದ ನಡುವೆ ಎದುರಾಗಿದ್ದ ಪ್ರಾಕೃತಿಕ ದುರಂತದ ಆಘಾತದಿಂದ ಜನತೆ ಹೊರಬರುವ ಮುನ್ನ, ಪ್ರಸಕ್ತ ಜನವರಿಯಲ್ಲೇ ಜಿಲ್ಲೆಯ ಹಲವೆಡೆ ಮಡಿಕೇರಿ ಸಹಿತ ಕುಡಿಯುವ ನೀರಿನ ಬವಣೆ ಎದುರಿಸುವಂತಾಗಿದೆ. ಈ ಮಡಿಕೇರಿ, ಜ. 23: ತೀವ್ರ ಜಲಸ್ಫೋಟದೊಂದಿಗೆ ಮಳೆಗಾಲದ ನಡುವೆ ಎದುರಾಗಿದ್ದ ಪ್ರಾಕೃತಿಕ ದುರಂತದ ಆಘಾತದಿಂದ ಜನತೆ ಹೊರಬರುವ ಮುನ್ನ, ಪ್ರಸಕ್ತ ಜನವರಿಯಲ್ಲೇ ಜಿಲ್ಲೆಯ ಹಲವೆಡೆ ಮಡಿಕೇರಿ ಸಹಿತ ಕುಡಿಯುವ ನೀರಿನ ಬವಣೆ ಎದುರಿಸುವಂತಾಗಿದೆ. ಈ ಅಮೀನ್ ಮೊಹ್ಸಿನ್ ಹಾಗೂ ಮನ್ಸೂರ್ ಅವರುಗಳ ಎದುರು ನೀರಿನ ಬವಣೆಯ ಕುರಿತು ಗಣಪತಿ ಬೀದಿ ನಿವಾಸಿಗಳು ಅಳಲು ತೋಡಿ ಕೊಂಡರು. ಐದು ದಿನಗಳಲ್ಲಿ ಒಂದೆರಡು ಬಿಂದಿಗೆ ನೀರು ಲಭಿಸಿದ್ದು, ಅದು ಕೂಡ ಕುಡಿಯಲು ಸಾಧ್ಯವಿಲ್ಲದೆ ಕೊಳಕು ಮಿಶ್ರಿತವೆಂದು ಅಸಮಾಧಾನ ತೋಡಿಕೊಂಡರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ನಾಗರಾಜ್ ಅವರನ್ನು ಸ್ಥಳಕ್ಕೆ ಕರೆಸಿದ ಜನಪ್ರತಿನಿಧಿಗಳು ಎರಡು ದಿನಗಳಲ್ಲಿ ನೀರಿನ ಬವಣೆ ಸರಿಪಡಿಸಲು ಸೂಚಿಸಿದರು.

ಕುಂಡಾ ಮೇಸ್ತ್ರಿ ಖಾಲಿ : ಆ ಬೆನ್ನಲ್ಲೇ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ (ಮೊದಲ ಪುಟದಿಂದ) ಹಾಗೂ ಹಿರಿಯ ಸದಸ್ಯ ಹೆಚ್.ಎಂ. ನಂದಕುಮಾರ್ ಕುಂಡಾಮೇಸ್ತ್ರಿ ಯೋಜನಾ ಘಟಕಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಕಳೆದ ಮಳೆಯ ತೀವ್ರತೆ ನಡುವೆ ಕುಂಡಾಮೇಸ್ತ್ರಿಯಲ್ಲಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ್ದ ತಾತ್ಕಾಲಿಕ ತಡೆಯು ಕೊಚ್ಚಿ ಹೋಗಿರುವದು ಕಂಡು ಬಂತು. ಅಲ್ಲದೆ ಆ ಪ್ರದೇಶ ಸಂಪೂರ್ಣ ಮರಳು ಇತ್ಯಾದಿಯಿಂದ ತುಂಬಿ ಹೋಗಿದ್ದು, ನೀರು ಸಂಗ್ರಹಾಗಾರಕ್ಕೆ ಕಿರು ಅಣೆಕಟ್ಟೆ (ತಾತ್ಕಾಲಿಕ ಚೆಕ್‍ಡ್ಯಾಂ)ಯಲ್ಲಿ ನೀರು ಶೇಖರಣೆ ಇಲ್ಲದಿರುವದು ಮತ್ತು ನೀರಿನ ಸರಬರಾಜು ವ್ಯವಸ್ಥೆ ಸಂಪರ್ಕ ಕಡಿತಗೊಂಡಿರುವದು ಕಂಡು ಬಂತು.

ತುರ್ತು ಕಾಮಗಾರಿ: ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತು ಹೂಳೆತ್ತುವ ಮೂಲಕ ನೀರು ಶೇಖರಣೆಗೆ ಕ್ರಮ ಕೈಗೊಳ್ಳಲು ನಿರ್ದೇಶಿಸಿದ ಜನಪ್ರತಿನಿಧಿಗಳು, ಎರಡು ದಿನಗಳಲ್ಲಿ ಸಮಸ್ಯೆ ಸರಿಪಡಿಸಿ ಜನತೆಗೆ ಆದ್ಯತೆ ಮೇರೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ನಿರ್ದೇಶಿಸಿದರು. ಗಾಳಿಬೀಡು ಬಳಿಯ ಕುಂಡಾಮೇಸ್ತ್ರಿ ನೀರು ಶೇಖರಣಾ ಘಟಕಕ್ಕೆ ಹೊಳೆಯಿಂದ ನೀರಿನ ಹರಿಯುವಿಕೆ ತಪ್ಪಿ ಹೋಗಿರುವ ಪರಿಣಾಮ, ಮಡಿಕೇರಿ ನಗರಕ್ಕೆ ಭವಿಷ್ಯದಲ್ಲಿ ನೀರಿನ ಬವಣೆ ತೀವ್ರಗೊಳ್ಳುವ ಆತಂಕ ವ್ಯಕ್ತಪಡಿಸಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಸದಸ್ಯ ನಂದಕುಮಾರ್, ತ್ವರಿತಗತಿಯಲ್ಲಿ ಕೆಲಸ ಕೈಗೊಂಡು ನೀರು ಸರಬರಾಜು ವ್ಯವಸ್ಥೆಯತ್ತ ಗಮನ ಹರಿಸಬೇಕೆಂದು ಪುನರುಚ್ಚರಿಸಿದರು.

ಕೂಟು ಹೊಳೆ ನೀರು : ಪ್ರಸಕ್ತ ಕೂಟುಹೊಳೆ ನೀರು ಸಂಗ್ರಹಾಗಾರದಲ್ಲಿ ನೈಸರ್ಗಿಕ ನೀರನ್ನು ಬಳಕೆಯೊಂದಿಗೆ, ಜನರು ಮಿತವಾಗಿ ಉಪಯೋಗಿಸಲು ಗಮನ ಹರಿಸಲಾಗುತ್ತಿದ್ದು, ಕನ್ನಂಡಬಾಣೆ ಹಾಗೂ ಪಂಪ್‍ಕೆರೆ ಘಟಕಗಳ ನೀರನ್ನು ದಿನ ಬಿಟ್ಟು ದಿನ ಗಣಪತಿ ಬೀದಿ ಮತ್ತು ಇತರೆಡೆ ಪೂರೈಸಲು ತುರ್ತು ನಿಗಾ ವಹಿಸುವದಾಗಿ ಅವರುಗಳು ನುಡಿದರು.

ರೂ. 5 ಕೋಟಿ ಯೋಜನೆ : ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮುಂದಿನ ದಿನಗಳಲ್ಲಿ ಮಡಿಕೇರಿ ಮಾತ್ರವಲ್ಲದೆ ಗ್ರಾಮೀಣ ಜನತೆ ಕೂಡ ಜಿಲ್ಲೆಯೆಲ್ಲೆಡೆ ನೀರಿಗೆ ಬವಣೆ ಪಡಬೇಕಾದೀತು ಎಂದು ಆತಂಕ ವ್ಯಕ್ತಪಡಿಸಿದರು. ಎಲ್ಲೆಡೆ ಜಲಮೂಲ ಬತ್ತುವದರೊಂದಿಗೆ ಕುಂಡಾಮೇಸ್ತ್ರಿ ಹೊಳೆ ಹರಿವು ಕೂಡ ಕ್ಷೀಣಗೊಂಡಿದ್ದನ್ನು ಅವರು ಬೊಟ್ಟು ಮಾಡಿದರು. ಹೀಗಾಗಿ ಅಲ್ಲಿ ರೂ. 5 ಕೋಟಿ ಮೊತ್ತದ ಕಿರು ಅಣೆಕಟ್ಟೆ ಚೆಕ್‍ಡ್ಯಾಂಗೆ ಕ್ರಮ ಕೈಗೊಂಡಿರುವದಾಗಿ ಮಾಹಿತಿ ನೀಡಿದರು.

ಆನ್‍ಲೇನ್ ಟೆಂಡರ್: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಈ ಕಾಮಗಾರಿಗೆ ಆನ್‍ಲೇನ್ ಮುಖಾಂತರ ಟೆಂಡರ್ ಆಗಿದ್ದು, ತುಮಕೂರಿನ ಗುತ್ತಿಗೆದಾರ ಎಂ.ಎನ್. ರಮೇಶ್ ಎಂಬವರಿಗೆ ಕೆಲಸ ವಹಿಸಲಾಗಿದೆ ಎಂದು ಮುಖ್ಯ ಅಭಿಯಂತರ ಜಯರಾಂ ಖಚಿತಪಡಿಸಿರುವದಾಗಿ ಅಧ್ಯಕ್ಷರು ಸ್ಪಷ್ಟಪಡಿಸಿದರು.