ಮಡಿಕೇರಿ, ಜ. 23: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ಕೊಡವ ಸಮಾಜದ ವತಿಯಿಂದ ಫೀ.ಮಾ. ಕಾರ್ಯಪ್ಪ ಜನ್ಮದಿನವಾದ ತಾ. 28 ರಂದು ಕಾರ್ಯಪ್ಪ ಅವರ ಸ್ಮರಣೆಯೊಂದಿಗೆ ವಿಶೇಷವಾದ ಸಾಂಸ್ಕøತಿಕ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ.ಫೀ.ಮಾ. ಕಾರ್ಯಪ್ಪ ಅವರ ಗೌರವಾರ್ಥ ಕಳೆದ ಹಲವಷ್ಟು ವರ್ಷಗಳಿಂದ ಈ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. 2003ರಲ್ಲಿ ಬೆಂಗಳೂರು ಸಮಾಜದ ಅಧ್ಯಕ್ಷರಾಗಿ ಮಲ್ಲೇಂಗಡ ದಾದಾ ಬೆಳ್ಯಪ್ಪ ಅವರು ಇದ್ದ ಸಂದರ್ಭದಲ್ಲಿ ಇದಕ್ಕೆ ಚಾಲನೆ ನೀಡಲಾಗಿದ್ದು, ಇದೀಗ 15ನೇ ವರ್ಷದ ಕಾರ್ಯಕ್ರಮ ಜರುಗಲಿದೆ.ಕಾರ್ಯಪ್ಪ ಅವರ ಹೆಸರಿನಲ್ಲಿ ಕೊಡವ ಸಾಂಸ್ಕøತಿಕ ಕಲೆಗೆ ಪ್ರಾಧಾನ್ಯತೆ ನೀಡುವ ನಿಟ್ಟಿನಲ್ಲಿ ಇದನ್ನು ಆರಂಭಿಸಲಾಗಿದ್ದು, ಬೆಂಗಳೂರಿನ ವಿವಿಧೆಡೆಗಳಲ್ಲಿರುವ ಕೊಡವ ಸಂಘಗಳ ನಡುವೆ ತಾ. 28ಕ್ಕೆ ಮುಂಚಿತವಾಗಿ ವಿವಿಧ ಜನಪದ ಕಲೆಗಳನ್ನು ಒಳಗೊಂಡಂತೆ ಅಂತರ ಸಂಘ ಸಾಂಸ್ಕøತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಇದರಲ್ಲಿ ಆಯ್ಕೆಗೊಂಡ ತಂಡಗಳಿಂದ ತಾ. 28 ರಂದು ಸಾಂಸ್ಕøತಿಕ ಪ್ರದರ್ಶನ, ಸಭಾ ಕಾರ್ಯಕ್ರಮಗಳು ಜರುಗುತ್ತವೆ. ಪ್ರಸಕ್ತ ಸಾಲಿನಲ್ಲಿ ವಸಂತನಗರದಲ್ಲಿರುವ ಕೊಡವ ಸಮಾಜದ ಸನಿಹದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ
(ಮೊದಲ ಪುಟದಿಂದ) ಕಾರ್ಯಪ್ಪ ಅವರ ಕಂಚಿನ ಬೃಹತ್ ಪ್ರತಿಮೆಯೂ ಅನಾವರಣಗೊಂಡಿದ್ದು, ಜನ್ಮದಿನವಾದ ತಾ. 28 ರಂದು ಈ ಪ್ರತಿಮೆಗೆ ಪುಷ್ಪಾರ್ಚನೆಯೊಂದಿಗೆ ಗೌರವ ನಮನ ಸಲ್ಲಿಸಿದ ಬಳಿಕ ಸಮಾಜದ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ನಿವೃತ್ತ ಮೇಜರ್ ಜನರಲ್ ಪಾರುವಂಗಡ ಎಂ. ಕಾರ್ಯಪ್ಪ (ವಿಎಸ್‍ಎಂ) ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಕೊಡಗಿನವರಾದ ಅಡ್ಡಂಡ ಸಿ. ಕಾರ್ಯಪ್ಪ ಅವರು ಪಾಲ್ಗೊಳ್ಳಲಿದ್ದಾರೆ.