ಮಡಿಕೇರಿ, ಜ. 30: ಕೊಡಗು ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಏನ್ನೀಸ್ ಕಣ್ಮಣಿ ಜಾಯ್ ನೇಮಕಗೊಂಡಿದ್ದಾರೆ. ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ (ಡಿಪಿ-ಆರ್) ಶಕುಂತಲ ಚೌಗಾಲ ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಏನ್ನೀಸ್ ಕಣ್ಮಣಿ ಜಾಯ್ ಅವರು ತುಮಕೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತ್ತಿದ್ದು ಇದೀಗ ಕೊಡಗು ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.ಈ ಹಿಂದೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತ್ತಿದ್ದ ಶ್ರೀವಿದ್ಯಾ ಅವರು ಎರಡು ತಿಂಗಳ ರಜೆಯಲ್ಲಿ ತೆರಳಿದ್ದು, ಹಂಗಾಮಿ ಜಿಲ್ಲಾಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಯಾಗಿದ್ದ ಲಕ್ಷ್ಮೀಪ್ರಿಯ ಅವರು ನೇಮಕಗೊಂಡಿದ್ದರು.