ಕೂಡಿಗೆ, ಜ. 30: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮಕ್ಕೆ ಭೂಮಿ ಮತ್ತು ವಸತಿ ಸಮಿತಿ ತಂಡ ಭೇಟಿ ನೀಡಿ ಪರಿಶೀಲಿಸಿತು.

ಕಳೆದ ಆರು ತಿಂಗಳ ಹಿಂದೆ ಉಂಟಾದ ಪ್ರಕೃತಿ ವಿಕೋಪದಿಂದಾಗಿ ನೆಲೆ ಕಳೆದುಕೊಂಡ ನಿರಾಶ್ರಿತರಿಂದ ಸಮಸ್ಯೆಗಳನ್ನು ಆಲಿಸಿದರು. ನಿರಾಶ್ರಿತರಿಂದ ಅಹವಾಲುಗಳನ್ನು ಸ್ವೀಕರಿಸಿದ ಭೂಮಿ ಮತ್ತು ವಸತಿ ಸಮಿತಿಯು, ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಸಂಬಂಧಪಟ್ಟವರ ಬಳಿ ಚರ್ಚೆ ನಡೆಸಲಾಗುವದು ಎಂದು ಭರವಸೆ ನೀಡಿದರು. ಭೂಮಿ ಮತ್ತು ಹೋರಾಟ ಸಮಿತಿಯ ರಾಜ್ಯ ಸಮಿತಿ ಸದಸ್ಯ ಕುಮಾರ್, ಪಾಲೇಮಾಡು ಹೋರಾಟಗಾರ ಮೊಣ್ಣಪ್ಪ, ಪಾಲೇಮಾಡು ಗ್ರಾ.ಪಂ ಅಧ್ಯಕ್ಷೆ ಕುಸುಮ ಹಾಗೂ ಎಸ್.ಡಿ.ಪಿ.ಐ ಪ್ರಮುಖರಾದ ಶಫಿ ಹಾಗೂ ಮತ್ತಿತರರು ಇದ್ದರು.