ಶ್ರೀಮಂಗಲ, ಜ. 31: ವೀರಾಜಪೇಟೆ ತಾಲೂಕಿನ ಕಾನೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳಿನಿಂದ ನಿರಂತರ ಸಿಂಗಲ್‍ಫೇಸ್ ವಿದ್ಯುತ್‍ನಿಂದ ಗ್ರಾಹಕರಿಗೆ ತೀವ್ರ ತೊಂದರೆಯಾಗಿದೆ. ಆರು ತಿಂಗಳ ಹಿಂದೆ ಕುಂದುಕೊರತೆ ಸಭೆಯಲ್ಲಿ ಸಮಸ್ಯೆಯನ್ನು ಬಗೆಹರಿಸುವ ಭರವಸೆಗಳನ್ನು ಚೆಸ್ಕಾಂ ಅಧಿಕಾರಿಗಳು ನೀಡಿದ್ದರೂ ಇದುವರೆಗೆ ಸ್ಪಂದನ ದೊರೆತಿಲ್ಲ. ಈ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಬಗೆಹರಿಸಲು ತಾ. 5ರಂದು ಗೋಣಿಕೊಪ್ಪಲುವಿನಲ್ಲಿರುವ ತಾಲೂಕು ಚೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಗೆ ಈ ವ್ಯಾಪ್ತಿಯ ಎಲ್ಲಾ ಬೆಳೆಗಾರರು ಹಾಗೂ ನಾಗರಿಕರ ಸಹಕಾರದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಗ್ರಾ.ಪಂ. ವ್ಯಾಪ್ತಿಯ ನಾಗರಿಕರ ಸಭೆಯಲ್ಲಿ ನಿರ್ಧರಿಸಲಾಯಿತು. ಕಾನೂರು ಪಟ್ಟಣದಲ್ಲಿ ಈ ಬಗ್ಗೆ ನಡೆದ ಸಭೆಯಲ್ಲಿ ಕಳೆದ ಆರು ತಿಂಗಳಿನಿಂದ ಸಿಂಗಲ್‍ಫೇಸ್ ಹಾಗೂ ವೋಲ್ಟೇಜ್ ಸಮಸ್ಯೆಯಿಂದ ದಿನನಿತ್ಯ ತೊಂದರೆ ಉಂಟಾಗಿದೆ. ಈ ಹಿಂದೆ ಶ್ರೀಮಂಗಲ ವಿದ್ಯುತ್ ಸರಬರಾಜು ಕೇಂದ್ರದಿಂದ ಕಾನೂರು ವ್ಯಾಪ್ತಿಗೆ 11ಕೆ.ವಿ. ವಿದ್ಯುತ್ ಮಾರ್ಗದಿಂದ ಸಂಪರ್ಕವಿತ್ತು; ಈ ಮಾರ್ಗದಲ್ಲಿ ನಿರಂತರ ವ್ಯತ್ಯಯ ಹಿನ್ನೆಲೆಯಲ್ಲಿ ಪೊನ್ನಂಪೇಟೆ ವಿದ್ಯುತ್ ಸರಬರಾಜು ಕೇಂದ್ರದಿಂದ ಈ ವ್ಯಾಪ್ತಿಗೆ ಸಂಪರ್ಕ ನೀಡಲಾಗಿದೆ. ಆದರೂ ವಿದ್ಯುತ್ ಸಮಸ್ಯೆ ಸುಧಾರಣೆ ಕಂಡಿಲ್ಲ ಎಂದು ಕಾನೂರು ಸೇವಾ ಸಂಘದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಐದು ತಿಂಗಳ ಹಿಂದೆ ಚೆಸ್ಕಾಂನ ಎಸ್.ಇ. ಹಾಗೂ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗೋಣಿಕೊಪ್ಪಲುವಿನಲ್ಲಿ ನಡೆದ ವಿದ್ಯುತ್ ಕುಂದುಕೊರತೆ ಸಭೆಯಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಎ.ಇ.ಇ. ಅಂಕಯ್ಯ

(ಮೊದಲ ಪುಟದಿಂದ) ಅವರಿಗೆ ಸೂಚಿಸಿದ್ದರೂ ಇದಕ್ಕೆ ಅವರು ಸ್ಪಂದಿಸಿಲ್ಲ. ಸಾರ್ವಜನಿಕರ ಬಳಕೆಗಿರುವ ಟ್ರಾನ್ಸಫಾರ್ಮರ್ ಕೆಟ್ಟು ಹೋಗಿದ್ದು ಅದನ್ನು ಬದಲಾಯಿಸಲು ಇಲ್ಲಿನ ಗ್ರಾಹಕರಿಂದಲೇ 60 ಸಾವಿರ ರೂ. ಗಳನ್ನು ಇಲಾಖೆ ವಸೂಲು ಮಾಡಿದ್ದು ಇದನ್ನು ವಾಪಸು ನೀಡಬೇಕೆಂದು ರಾಜೀವ್‍ಬೋಪಯ್ಯ ಒತ್ತಾಯಿಸಿದರು.

ಬಾಳೆಲೆ ವಿದ್ಯುತ್ ಮಾರ್ಗಕ್ಕೆ ಕೇಬಲ್ ಅಳವಡಿಕೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಹೂಟಗಳ್ಳಿಯಿಂದ 440 ವೋಲ್ಟ್ ಸಂಪೂರ್ಣ ಸಾಮಾಥ್ರ್ಯದಲ್ಲಿ ಪೊನ್ನಂಪೇಟೆ ಮಾರ್ಗಕ್ಕೆ ವಿದ್ಯುತ್ ಹರಿಯುತಿಲ್ಲ. ಮಂಜುಗಳಿಂದ ಇನ್ಸುಲೇಟರ್ ಹೊಡೆಯುತ್ತಿದೆ ಎನ್ನುವ ಕಾರಣಗಳನ್ನು ವಿದ್ಯುತ್ ಸಮಸ್ಯೆಗೆ ಚೆಸ್ಕಾಂ ಅಧಿಕಾರಿಗಳು ನೀಡುತ್ತ್ತಿದ್ದಾರೆ. ಅಲ್ಲದೆ ರಸ್ತೆ ಮೂಲಕ 11 ಕೆ.ವಿ. ವಿದ್ಯುತ್ ಮಾರ್ಗ ಹಾಕಿ ವಿದ್ಯುತ್ ಮಾರ್ಗದಲ್ಲಿ ಉಂಟಾಗುವ ಅಡಚಣೆ ತಪ್ಪಿಸುವಂತೆ ಮನವಿ ಮಾಡಿದರೂ ಮಾಡಲಾಗುತ್ತಿದೆ. ಹೂಟಗಳ್ಳಿಯಿಂದ 440 ವೋಲ್ಟ್ ಸಂಪೂರ್ಣ ಸಾಮಾಥ್ರ್ಯದಲ್ಲಿ ಪೊನ್ನಂಪೇಟೆ ಮಾರ್ಗಕ್ಕೆ ವಿದ್ಯುತ್ ಹರಿಯುತಿಲ್ಲ. ಮಂಜುಗಳಿಂದ ಇನ್ಸುಲೇಟರ್ ಹೊಡೆಯುತ್ತಿದೆ ಎನ್ನುವ ಕಾರಣಗಳನ್ನು ವಿದ್ಯುತ್ ಸಮಸ್ಯೆಗೆ ಚೆಸ್ಕಾಂ ಅಧಿಕಾರಿಗಳು ನೀಡುತ್ತ್ತಿದ್ದಾರೆ. ಅಲ್ಲದೆ ರಸ್ತೆ ಮೂಲಕ 11 ಕೆ.ವಿ. ವಿದ್ಯುತ್ ಮಾರ್ಗ ಹಾಕಿ ವಿದ್ಯುತ್ ಮಾರ್ಗದಲ್ಲಿ ಉಂಟಾಗುವ ಅಡಚಣೆ ತಪ್ಪಿಸುವಂತೆ ಮನವಿ ಮಾಡಿದರೂ ಎತ್ತರಿಸಲು ಯೋಜನೆ ಇದ್ದರೂ ಇಂದಿಗೂ ಈ ವ್ಯಾಪ್ತಿಯಲ್ಲಿ ಮರದ, ಕಬ್ಬಿಣದ ವಿದ್ಯುತ್ ಕಂಬಗಳಿವೆ ಅಲ್ಲದೆ ಬಹಳಷ್ಟು ಕಡೆ ಮನುಷ್ಯ ಕೈಎತ್ತರಿಸಿದರೆ ತಂತಿ ತಗುಲುವ ಅಪಾಯದಲ್ಲಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಈ ವ್ಯಾಪ್ತಿಯ ವಿದ್ಯುತ್ ಸಮಸ್ಯೆಯಿಂದ ಕಿರು ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಪರೀಕ್ಷೆ ಸಮಯವಾಗಿರುವದರಿಂದ ಮಕ್ಕಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ವೋಲ್ಟೇಜ್ ಸಮಸ್ಯೆಯಿಂದ ಬೀದಿ ದೀಪಗಳು ಉರಿಯುತ್ತಿಲ್ಲ. ಕಾಫಿ ಬೆಳೆಯನ್ನೇ ನಂಬಿರುವ ಬೆಳೆಗಾರರು ಪಂಪ್‍ಸೆಟ್ ಮೂಲಕ ತೋಟಗಳಿಗೆ ನೀರು ಪೂರೈಸಲು ತೊಂದರೆಯಾಗುತ್ತಿದೆ. ಗ್ರಾ. ಪಂ. ಕಚೇರಿಯಲ್ಲಿಯೂ ಕೆಲಸ ಕಾರ್ಯಕ್ಕೆ ವಿದ್ಯುತ್‍ನಿಂದ ತೊಂದರೆಯಾಗುತ್ತಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು. ಕೋತೂರು ಗ್ರಾಮದ ಅಣ್ಣಳಮಾಡ ನವೀನ್ ಅಚ್ಚಯ್ಯ ಮಾತಾನಾಡಿ ನಮ್ಮ ಗ್ರಾಮವು ಆನೆ ಕಾರಿಡಾರ್ ವ್ಯಾಪ್ತಿಗೆ ಬರುತ್ತದೆ ಆದರೆ ಮಂಜೂರಾದ ವಿದ್ಯುತ್ ಕಂಬಗಳನ್ನು ಇಲ್ಲಿಗೆ ಹಾಕಿಲ್ಲ. ಸಾರ್ವಜನಿಕರ ಬಳಕೆಗೆ ಅಳವಡಿಸಿರುವ ಟ್ರಾನ್ಸ್‍ಫಾರ್ಮರ್ ನಿಂದಲೇ ಪಂಪ್‍ಸೆಟ್‍ಗೆ ಬಳಸುತ್ತಿದ್ದು, ಇದರಿಂದ ವಿದ್ಯುತ್ ವೋಲ್ಟೇಜ್ ಕಡಿಮೆಯಾಗಿದೆ. ಈ ಬಗ್ಗೆ ಹಲವು ಕುಂದುಕೊರತೆ ಸಭೆಯಲ್ಲಿ ಮನವಿ ಮಾಡಿದರೂ ಚೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಚೆರಿಯಪಂಡ ಈಶಬೆಳ್ಯಪ್ಪ, ಡ್ಯಾನಿ, ಗ್ರಾ.ಪಂ. ಸದಸ್ಯ ಕೇಚಮಾಡ ಸಿದ್ದು, ಸಿ.ಪಿ. ಕರುಂಬಯ್ಯ, ಕೊಟ್ಟಂಗಡ ನಂದ ಕಾರ್ಯಪ್ಪ, ಮಚ್ಚಮಡ ಕಂದಭೀಮಯ್ಯ, ಅಳಮೇಂಗಡ ವಿವೇಕ್, ಕುಂಞÂಮಾಡ ಸದಾಶಿವ, ಹರೀಶ್, ಚೆರಿಯಪಂಡ ನಿಖಿಲ್ ಮತ್ತಿತರರು ಮಾತಾನಾಡಿದರು.