*ಗೋಣಿಕೊಪ್ಪಲು, ಜ. 31: ಜಾನಪದ ಪರಿಷತ್ ಗೋಣಿಕೊಪ್ಪ ಪೊನ್ನಂಪೇಟೆ ಹೋಬಳಿ ಘಟಕದ ಕಾರ್ಯ ಚಟುವಟಿಕೆಗೆ ಜಿ.ಪಂ ಮಾಜಿ ಸದಸ್ಯ ಮೂಕಳೇರ ಕುಶಾಲಪ್ಪ ಹತ್ತು ಸಾವಿರ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.
ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಅನಂತಶಯನ ಅಧ್ಯಕ್ಷತೆಯಲ್ಲಿ ನಡೆದ ಗೋಣಿಕೊಪ್ಪ, ಪೊನ್ನಂಪೇಟೆ ಹೋಬಳಿ ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಕುಶಾಲಪ್ಪ ಅವರು ದೇಣಿಗೆ ರೂಪದಲ್ಲಿ ಜಿಲ್ಲಾ ಜಾನಪದ ಪರಿಷತ್ ಕೋಶಾಧಿಕಾರಿ ಸಂಪತ್‍ಕುಮಾರ್ ಅವರಿಗೆ ನೀಡಿದರು.
ಇದೆ ಸಂದರ್ಭ ಹೋಬಳಿ ಘಟಕದ ಅಧ್ಯಕ್ಷರಾದ ಚೇಂದಂಡ ಸುಮಿಸುಬ್ಬಯ್ಯ ಐದು ಸಾವಿರ ರೂಪಾಯಿ ಚೆಕ್‍ನ್ನು ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಎಂ.ಜಿ. ಮೋಹನ್ ಅವರು ಸಹ ಐದು ಸಾವಿರ ರೂಪಾಯಿಯನ್ನು ಹೋಬಳಿ ಘಟಕದ ಕಾರ್ಯ ಚಟುವಟಿಕೆಗೆ ಒಪ್ಪಿಸಿದರು.