ಕುಶಾಲನಗರ, ಜ. 31: ಭಾರೀ ಮಳೆಯೊಂದಿಗೆ ಪ್ರಕೃತಿ ವಿಕೋಪ ಕ್ಕೊಳಗಾದ ಕಾವೇರಿ ನದಿ ಪಾತ್ರದ ಜನತೆಯನ್ನು ತಲ್ಲಣ ಗೊಳಿಸಿದ್ದ ಹಾರಂಗಿ ಜಲಾಶಯ ಇದೀಗ ನೀರಿಲ್ಲದೆ ಬಣಗುಡುತ್ತಿರುವ ದೃಶ್ಯ ಕಾಣಬಹುದು. 2018ರ ಆಗಸ್ಟ್ ತಿಂಗಳಲ್ಲಿ ಭಾರೀ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಟ್ಟ ಹಿನ್ನಲೆಯಲ್ಲಿ ನದಿ ಪಾತ್ರದ ನೂರಾರು ಮನೆಗಳು, ಕೃಷಿ ಭೂಮಿಗಳು ಜಲಾವೃತಗೊಳ್ಳುವ ದರೊಂದಿಗೆ ಇಡೀ ಜನಜೀವನವೇ ಅಸ್ತವ್ಯಸ್ಥ ಗೊಂಡಿರುವದು ಸ್ಮರಿಸಬಹುದು.
ಕೇವಲ 5 ತಿಂಗಳ ಅಂತರದ ಅವಧಿಯಲ್ಲಿ ಜಲಾಶಯಕ್ಕೆ ನೀರಿನ ಹರಿವಿನ ಕೊರತೆ ಎದುರಾಗಿದ್ದು ಪ್ರಸಕ್ತ ಜಲಾಶಯದಲ್ಲಿ ಕೇವಲ ಕನಿಷ್ಟ ಪ್ರಮಾಣದ ನೀರು ಮಾತ್ರ ಸಂಗ್ರಹವಾಗಿರುವದು ಗೋಚರಿಸಿದೆ.
ಕಳೆದ ಬಾರಿಗಿಂತ ಭಾರೀ ಪ್ರಮಾಣದ ಕಡಿಮೆ ನೀರಿನ ಸಂಗ್ರಹ ಈ ಬಾರಿ ಕಂಡುಬಂದಿದ್ದು ಹಾರಂಗಿ ಯೋಜನಾ ವೃತ್ತದ ಅಚ್ಚುಕಟ್ಟು ವ್ಯಾಪ್ತಿಯ ರೈತರ ಜಮೀನಿನ ಬೇಸಿಗೆ ಬೆಳೆಗೆ ನೀರಿನ ಕೊರತೆಯೊಂದಿಗೆ ಕೃಷಿ ಚಟುವಟಿಕೆಗಳಿಗೆ ಧಕ್ಕೆ ಉಂಟಾಗಿದೆ. 2859 ಅಡಿಗಳಷ್ಟು ಗರಿಷ್ಠ ಸಂಗ್ರಹ ಮಿತಿ ಹೊಂದಿರುವ ಜಲಾಶಯದಲ್ಲಿ ಇದೀಗ ತಳಮಟ್ಟಕ್ಕೆ ನೀರು ಇಳಿದಿದೆ. ಅಣೆಕಟ್ಟೆಯ ಸಮೀಪದಲ್ಲಿರುವ ಖಾಸಗಿ ವಿದ್ಯುತ್ ಉತ್ಪಾದನಾ ಘಟಕ ಕೂಡ ನೀರಿನ ಕೊರತೆಯಿಂದ ತನ್ನ ಕಾರ್ಯ ಸ್ಥಗಿತಗೊಳಿಸಿದೆ.
ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಸಂಪೂರ್ಣ ಸ್ಥಗಿತ ಗೊಂಡಿದ್ದು ಇದರಿಂದ ಜಲಾಶಯ ದಲ್ಲಿ ನೀರಿನ ಕೊರತೆ ಕಂಡುಬಂದಿದೆ ಎಂದು ಹಾರಂಗಿ ಅಣೆಕಟ್ಟು ವಿಭಾಗದ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದ್ದಾರೆ.
ಇದೇ ಪರಿಸ್ಥಿತಿ ಮುಂದುವರೆದಲ್ಲಿ ಸೋಮವಾರಪೇಟೆ ಪಟ್ಟಣಕ್ಕೆ ಪ್ರಮಾಣದ ಕಡಿಮೆ ನೀರಿನ ಸಂಗ್ರಹ ಈ ಬಾರಿ ಕಂಡುಬಂದಿದ್ದು ಹಾರಂಗಿ ಯೋಜನಾ ವೃತ್ತದ ಅಚ್ಚುಕಟ್ಟು ವ್ಯಾಪ್ತಿಯ ರೈತರ ಜಮೀನಿನ ಬೇಸಿಗೆ ಬೆಳೆಗೆ ನೀರಿನ ಕೊರತೆಯೊಂದಿಗೆ ಕೃಷಿ ಚಟುವಟಿಕೆಗಳಿಗೆ ಧಕ್ಕೆ ಉಂಟಾಗಿದೆ. 2859 ಅಡಿಗಳಷ್ಟು ಗರಿಷ್ಠ ಸಂಗ್ರಹ ಮಿತಿ ಹೊಂದಿರುವ ಜಲಾಶಯದಲ್ಲಿ ಇದೀಗ ತಳಮಟ್ಟಕ್ಕೆ ನೀರು ಇಳಿದಿದೆ. ಅಣೆಕಟ್ಟೆಯ ಸಮೀಪದಲ್ಲಿರುವ ಖಾಸಗಿ ವಿದ್ಯುತ್ ಉತ್ಪಾದನಾ ಘಟಕ ಕೂಡ ನೀರಿನ ಕೊರತೆಯಿಂದ ತನ್ನ ಕಾರ್ಯ ಸ್ಥಗಿತಗೊಳಿಸಿದೆ.
ಹಾರಂಗಿ ಜಲಾಶಯಕ್ಕೆ ನೀರಿನ ಒಳಹರಿವು ಸಂಪೂರ್ಣ ಸ್ಥಗಿತ ಗೊಂಡಿದ್ದು ಇದರಿಂದ ಜಲಾಶಯ ದಲ್ಲಿ ನೀರಿನ ಕೊರತೆ ಕಂಡುಬಂದಿದೆ ಎಂದು ಹಾರಂಗಿ ಅಣೆಕಟ್ಟು ವಿಭಾಗದ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದ್ದಾರೆ.
ಇದೇ ಪರಿಸ್ಥಿತಿ ಮುಂದುವರೆದಲ್ಲಿ ಸೋಮವಾರಪೇಟೆ ಪಟ್ಟಣಕ್ಕೆ ಕಳೆದ ಮಳೆಗಾಲದಲ್ಲಿ ಬೆಟ್ಟ ಕುಸಿತ ಉಂಟಾದ ಹಿನ್ನಲೆಯಲ್ಲಿ ಹಾರಂಗಿ ಜಲಾಶಯದಲ್ಲಿ ಭಾರಿ ಪ್ರಮಾಣದ ಹೂಳು ಮತ್ತು ಮರಗಳು, ತ್ಯಾಜ್ಯಗಳು ತುಂಬಿದ್ದು ತಕ್ಷಣ ತೆರವುಗೊಳಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕಾವೇರಿ ನೀರಾವರಿ ನಿಗಮ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ನಡೆಸಿದೆ. ಮಳೆಗಾಲ ಮುನ್ನ ಹೂಳನ್ನು ತೆರವುಗೊಳಿಸಿದಲ್ಲಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಪ್ರಮಾಣಕ್ಕೆ ಅವಕಾಶ ಕಲ್ಪಿಸಲು ಸಾಧ್ಯ. ಹಟ್ಟಿಹೊಳೆ, ಮಾದಾಪುರ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿದ್ದು ಬಹುತೇಕ ಮಣ್ಣು ಜಲಾಶಯದ ಒಡಲು ಸೇರಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಈ ಸಾಲಿನ ಮೇ ಒಳಗೆ ಹೂಳು ತೆಗೆಯುವ ಕಾರ್ಯ ನಡೆಯ ಬೇಕಾಗಿದೆ. ಈ ಬಗ್ಗೆ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯಲಾಗುವದು ಎಂದಿದ್ದಾರೆ.
- ಚಂದ್ರಮೋಹನ್