ಮಡಿಕೇರಿ, ಜ. 31: ನವದೆಹಲಿಯಲ್ಲಿ ಈ ಬಾರಿ ಜರುಗಿದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗಿಯಾಗಿ ರಾಷ್ಟ್ರದ 17 ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಎನ್‍ಸಿಸಿಯ ಕರ್ನಾಟಕ- ಗೋವಾ ಡೈರೆಕ್ಟರೇಟ್‍ನ ಕಂಟಿಜೆಂಟ್ ಕಮಾಂಡರ್ ಕೊಡಗಿನವರಾದ ಚೀಯಕಪೂವಂಡ ಕರ್ನಲ್ ಬೋಪಣ್ಣ ಅವರು ತಂಡದ ಪರವಾಗಿ ಟ್ರೋಫಿ ಸ್ವೀಕರಿಸಿದರು.