ಮಡಿಕೇರಿ, ಜ. 31: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಯೋಗದೊಂದಿಗೆ ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾ. 2 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರ ತನಕ ಏರ್ಪಡಿಸಿರುವ ಉದ್ಯೋಗ ಮೇಳದಲ್ಲಿ ಸೇವಾ ಇಂಟರ್‍ನ್ಯಾಷನಲ್ ಭಾಗವಹಿಸಲಿದೆ. ಆ ದಿನದಂದು ಸೇವಾ ಕಾರ್ಯಕರ್ತರು ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ಕುರಿತು ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಅಭ್ಯರ್ಥಿಗಳು ಅರ್ಜಿಯನ್ನು ಸ್ಥಳದಲ್ಲೇ ತುಂಬಬಹುದು ಎಂದು ತಿಳಿಸಿದ್ದಾರೆ.