ಕುಶಾಲನಗರ, ಜ. 31: ಕುಶಾಲನಗರದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿರುವ ಶ್ರೀ ಗಣಪತಿ ಗುಡಿಯ ವಾರ್ಷಿಕೋತ್ಸವ ಅಂಗವಾಗಿ ದೇವಾಲಯದಲ್ಲಿ ಮೃತ್ಯುಂಜಯ ಹೋಮ ಪೂಜಾ ಕಾರ್ಯಕ್ರಮ ನಡೆಯಿತು.

ಹರಿಭಟ್ ನೇತೃತ್ವದಲ್ಲಿ ಸೋಮಶೇಖರ್ ಭಟ್, ಕೃಷ್ಣಮೂರ್ತಿ ಭಟ್ ತಂಡದಿಂದ ವಿವಿಧ ಪೂಜಾ ವಿಧಿ, ಹೋಮ ಹವನ ನಡೆಯಿತು. ಮಧ್ಯಾಹ್ನ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ನೆರವೇರಿಸಲಾಯಿತು.

ಪೂಜೋತ್ಸವದಲ್ಲಿ ದೇವಾಲಯ ಟ್ರಸ್ಟ್ ಅಧ್ಯಕ್ಷರಾದ ಗಣಪತಿ, ಪ್ರಮುಖರಾದ ಸುಬ್ಬಯ್ಯ, ಎಸ್.ಕೆ. ಶ್ರೀನಿವಾಸರಾವ್, ಸುಬ್ರಮಣಿ, ಕುಶಾಲನಗರ ಪಪಂ ಸದಸ್ಯೆ ರೂಪಾ ಉಮಾಶಂಕರ್, ವಿ.ಎಸ್.ಆನಂದಕುಮಾರ್, ಡಿ.ಕೆ.ತಿಮ್ಮಪ್ಪ, ಉದ್ಯಮಿ ಉಮಾಶಂಕರ್, ಪ್ರಮುಖರಾದ ಚಂದ್ರು, ಡಿ.ಆರ್.ಸೋಮಶೇಖರ್ ಮತ್ತಿತರರು ಇದ್ದರು.