ಗುಡ್ಡೆಹೊಸೂರು, ಜ. 31 :ಇಲ್ಲಿಗೆ ಸಮೀಪದ ಚಿಕ್ಕಬೆಟ್ಟಗೇರಿಯಲ್ಲಿ ಹುಲಿಯು ಹಸುವನ್ನು ಕೊಂದು ಸುಮಾರು 100ವೀಟರ್ ದೂರದವರಗೆ ಕೊಂಡೊಯ್ದು ಮರುದಿನ ಅದೇ ಸ್ಥಳಕ್ಕೆ ಆಗಮಿಸಿ ಹಸುವಿನ ಮಾಂಸ ತಿಂದು ತೆರಳಿತ್ತು. ಆದರೆ ಮರುದಿನ ಅರಣ್ಯ ಇಲಾಖೆಯವರು ಸಿ.ಸಿ.ಕ್ಯಾಮರಾ ಅಳವಡಿಸಿ ಹುಲಿಯ ಚಲನವಲನ ವೀಕ್ಷಿಸಿದರು. ಎರಡು ದಿನ ಹಸುವಿನ ಮಾಂಸ ತಿಂದು ತೆರಳಿರುವ ದೃಶ್ಯ ಕ್ಯಾಮರಾದಲ್ಲಿ ಸೇರೆಯಾಗಿದೆ. ಈ ಹುಲಿಯು ಅನೇಕ ದಿನಗಳಿಂದ ಈ ವಿಭಾಗದಲ್ಲಿ ಅಂದರೆ ರಂಗಸಮುದ್ರ, ನಂಜರಾಯಪಟ್ಟಣ, ಹೊಸಪಟ್ಟಣ ಅರಣ್ಯದಂಚಿನಲ್ಲಿ ಗೋಚರಿಸಿದೆ ಎಂದು ತಿಳಿದು ಬಂದಿದೆ.