ಮಡಿಕೇರಿ, ಜ. 31 : ಕಳೆದ ವರ್ಷದ ಪ್ರವಾಹದಿಂದ ಸಂಕÀಷ್ಟಕ್ಕೆ ಸಿಲುಕಿರುವ ಕೊಡಗಿನ ವಿದ್ಯಾರ್ಥಿಗಳು ಹಾಗೂ ಯುವ ಜನರಿಗಾಗಿ ‘ಸೇವಾ ಇಂಟರ್‍ನ್ಯಾಷನಲ್” ಸಂಸ್ಥೆ ವೃತ್ತಿ ಕೌಶಲ್ಯ ಹಾಗೂ ಮಾಹಿತಿ ತಂತ್ರಜ್ಞಾನ ತರಬೇತಿಯನ್ನು ಆಯೋಜಿಸಿದೆ.
ವಿದ್ಯಾರ್ಥಿಗಳು ಸೂಕ್ತ ವೃತ್ತಿಯನ್ನು ಆಯ್ದುಕೊಳ್ಳಲು ತಜ್ಞರಿಂದ ಸಲಹೆ ಹಾಗೂ ಉದ್ಯಮಗಳಲ್ಲಿ ಉದ್ಯೋಗ ಗಳಿಕೆಗೆ ನೆರವು ಈ ತರಬೇತಿಯಲ್ಲಿ ಲಭ್ಯ ಎಂದು ಸೇವಾ ಇಂಟರ್ ನ್ಯಾಷನಲ್ ಕೊಡಗು ಪ್ರವಾಹ ಪುನರ್ವಸತಿ ಯೋಜನಾ ಕಾರ್ಯನಿರ್ವಾಹಕ ನಿರ್ದೇಶಕ ಬಿಂದುಮಾಧವ ಕೆರೂರ್ ತಿಳಿಸಿದ್ದಾರೆ.
ತನ್ನ ದೀರ್ಘಕಾಲೀಕ ಕೊಡಗಿನ ಪ್ರವಾಹ ಸಂತ್ರಸ್ತರ ಮರು ವಸತಿ ಯೋಜನೆಯ ಭಾಗವಾಗಿ ಸೇವಾ ಇಂಟರ್‍ನ್ಯಾಷನಲ್ ಈ ತರಬೇತಿ ಯನ್ನು ಆಯೋಜಿಸಿದ್ದು ಆಸಕ್ತರಿಂದ ಅರ್ಜಿಗಳು ಆಹ್ವಾನಿಸಿದೆ. ಈ ಅರ್ಜಿ ಗಳನ್ನು ಗೂಗಲ್ ವಿಳಾಸದ ಮೂಲಕ hಣಣಠಿs://ಣiಟಿಥಿuಡಿಟ.ಛಿom/ಥಿ8ಞeಞಜಿಥಿರಿ ಆನ್‍ಲೈನ್‍ನಲ್ಲಿ ಶುಕ್ರವಾರ ಫೆ.8ರ ಒಳಗೆ ತುಂಬಬಹುದು. ಖಾಸಗಿ ಕಂಪೆನಿಗಳು, ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅಥವಾ ಸ್ವಂತ ಉದ್ಯಮ ಆರಂಭಿಸಲು ಈ ತರಬೇತಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಿದೆ.