ಗೋಣಿಕೊಪ್ಪ ವರದಿ, ಜ. 31 : ಕೇರಳದ ಕೊಲ್ಲಂ ಮೈದಾನದಲ್ಲಿ ಹಾಕಿ ಇಂಡಿಯಾ ವತಿಯಿಂದ ಆರಂಭಗೊಂಡಿರುವ ಎ. ಡಿವಿಜನ್ ಕಿರಿಯ ಬಾಲಕಿಯರ ರಾಷ್ಟ್ರೀಯ ಹಾಕಿ ಕ್ರೀಡಾಕೂಟದಲ್ಲಿ ಹಾಕಿಕೂರ್ಗ್ ತಂಡ ಮೊದಲ ಪಂದ್ಯದಲ್ಲಿ ಸೋಲನುಭವಿ ಸಿದೆ. ಜಾರ್ಖಂಡ್ ವಿರುದ್ಧ ಕಣಕ್ಕಿಳಿದ ಕೂರ್ಗ್ ತಂಡವು ಗೋಲು ದಾಖಲಿಸಲಾಗದೆ 0-1 ಗೋಲುಗಳ ಮೂಲಕ ಸೋಲನುಭವಿಸಿತು. ಹಾಕಿಕೂರ್ಗ್ ಪರ ಆರ್. ಅನ್ನಪೂರ್ಣ, ಹೆಚ್.ಜಿ. ಧನುಶ್ರೀ, ಕೆ.ಎ. ಪಾರ್ವತಿ, ಚಿ. ಭೂಮಿಕಾ, ಶಯ ಕಾವೇರಮ್ಮ, ಕೆ.ಎ. ವಿನ್ಯಶ್ರೀ, ಕೆ.ಜಿ. ಸಂಧ್ಯಾ, ಪಿ.ಟಿ. ಕಾವೇರಮ್ಮ, ಮಂಜವ್ವ, ಕೆ.ಕೆ. ಗೌತಮಿ, ಪಿ.ಟಿ. ಶಿಲ್ಪ, ಲೀಲಾವತಿ, ಎಸ್. ಅದಿರಾ, ಅಪ್ಸರ, ಪ್ರೇಕ್ಷಾ, ಎಂ.ಎಂ. ಪದ್ಮಿನಿ, ತರಬೇತು ದಾರರಾಗಿ ಕಾವ್ಯಶ್ರೀ, ವ್ಯವಸ್ಥಾಪಕಿಯಾಗಿ ಹರಿಣಾಕ್ಷಿ ಪಾಲ್ಗೊಂಡಿದ್ದಾರೆ.