ಗೋಣಿಕೊಪ್ಪ ವರದಿ, ಫೆ. 1 : ಗೋಣಿಕೊಪ್ಪ ಪಟ್ಟಣದ ನಿವಾಸಿ ರವಿ ಅವರ ಪತ್ನಿ ನಸ್ರಿನ್ (38) ಹಲವು ದಿನಗಳಿಂದ ನಾಪತ್ತೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 5.2 ಅಡಿ ಎತ್ತರವಿರುವ ನಸ್ರಿನ್, ಬಿಳಿ ಮೈಬಣ್ಣ, ತೆಳ್ಳಗಿನ ಮುಖ ಹೊಂದಿದ್ದಾರೆ. ಕನ್ನಡ, ಹಿಂದಿ, ತುಳು, ಮಲೆಯಾಳಂ ಹಾಗೂ ಕೊಡವ ಭಾಷೆ ತಿಳಿದಿದೆ.
ಜನವರಿ 17 ರಂದು ಔಷಧಿ ತೆಗೆದುಕೊಂಡು ಬರುವದಾಗಿ ಪಟ್ಟಣಕ್ಕೆ ಹೋದವಳು ಹಿಂತಿರುಗಿ ಬಂದಿಲ್ಲ ಎಂದು ಪತಿ ರವಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರನ್ನು ಕಂಡವರು ಗೋಣಿಕೊಪ್ಪ ಪೊಲೀಸ್ ಠಾಣೆ ಸಂಖ್ಯೆ 08274 247333 ಸಂಪರ್ಕಿಸಲು ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.