ಸುಂಟಿಕೊಪ್ಪ, ಫೆ.1 : ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕೊಡಗು ಜಿಲ್ಲೆಯ 3 ತಾಲೂಕಿಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು ಅವಿರೋಧ ಆಯ್ಕೆ ನಡೆದಿದೆ.
ಸೋಮವಾರಪೇಟೆ ತಾಲೂಕು ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ನಾಗಪ್ಪ, ಕಾರ್ಯಾಧ್ಯಕ್ಷರಾಗಿ ಪಿಲಿಫ್‍ವಾಸ್, ಪ್ರಧಾನ ಕಾರ್ಯದರ್ಶಿಯಾಗಿ ರುದ್ರಪ್ಪ ಖಜಾಂಜಿಯಾಗಿ ಹೆಚ್.ಜೆ.ನಾಗರಾಜ ಆಯ್ಕೆಯಾಗಿದ್ದಾರೆ.
ಮಡಿಕೇರಿ ತಾಲೂಕು ಪದವಿ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಟಿ.ಹೇಮಂತ ಕುಮಾರ್, ಕಾರ್ಯಾಧ್ಯಕ್ಷರಾಗಿ ಕೆ.ಎಸ್.ಕೃಷ್ಣ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಚಿದಾನಂದ, ಖಜಾಂಜಿಯಾಗಿ ಪಿ.ಕೆ.ರವಿಶಂಕರ್ ಆಯ್ಕೆಯಾಗಿದ್ದಾರೆ.
ವೀರಾಜಪೇಟೆ ತಾಲೂಕು ಪದವಿ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಸರ್ವೊತ್ತಮ್ ಕಾರ್ಯಾಧ್ಯಕ್ಷರಾಗಿ ಆರ್. ರಮೇಶ್ ಪ್ರಧಾನ ಕಾರ್ಯದರ್ಶಿಯಾಗಿ ನೋಹ ವಿವೇಕ್ ಖಜಾಂಜಿಯಾಗಿ ರೀಟಾ ಅಲ್ಪಾರೀಸ್ ಆಯ್ಕೆಯಾಗಿದ್ದಾರೆ; ಚುನಾವಣಾಧಿಕಾರಿಯಾಗಿ ಸಿ.ಎಂ. ವಿಶ್ವನಾಥ್ ಕಾರ್ಯನಿರ್ವಹಿಸಿದರು. ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳ ಆಯ್ಕೆ ತಾ. 6ರಂದು ನಡೆಯಲಿದೆ.