ಗೋಣಿಕೊಪ್ಪ ವರದಿ, ಫೆ. 1 : ತಿತಿಮತಿ ಮಾದರಿ ಪ್ರಾಥಮಿಕ ಶಾಲಾ ಶತಮಾನೋತ್ಸವ ಪ್ರಯುಕ್ತ ನಿರ್ಮಿಸಲು ಉದ್ದೇಶಿಸಿರುವ ಶತಮಾನೋತ್ಸವ ಸಭಾಂಗಣಕ್ಕೆ ಭೂಮಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಯಿತು.
ಶಾಲೆಯ ಆವರಣದಲ್ಲಿ ಶಾಸಕ ಕೆ. ಜಿ. ಬೋಪಯ್ಯ, ದಾನಿ ಬಾಚಮಾಡ ಕಮಲ ಸೋಮಯ್ಯ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಸದಸ್ಯೆ ಪಿ. ಆರ್. ಪಂಕಜ, ತಿತಿಮತಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಕುಮಾರ್, ಶತಮಾನೋತ್ಸವ ಸಮಿತಿ ಅಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ, ಸಮಿತಿ ಪ್ರಮುಖರುಗಳಾದ ಎನ್. ಎನ್. ಅನೂಪ್, ಚೆಪ್ಪುಡೀರ ಕಾರ್ಯಪ್ಪ, ಮುಖ್ಯ ಶಿಕ್ಷಕಿ ಪಾರ್ವತಿ ಉಪಸ್ಥಿತರಿದ್ದರು.
ಈ ಸಂದರ್ಭ ಮಾತನಾಡಿದ ಶತಮಾನೋತ್ಸವ ಸಮಿತಿ ಅಧ್ಯಕ್ಷ ಚೆಪ್ಪುಡೀರ ರಾಮಕೃಷ್ಣ ಶಾಸಕ ಬೋಪಯ್ಯ ಅವರ ನಿಧಿಯಿಂದ 5 ಲಕ್ಷ ಅನುದಾನ, ಇದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ದಾನಿ ಬಾಚಮಾಡ ಕಮಲ ಹಾಗೂ ಬಾಚಮಾಡ ಸೋಮಯ್ಯ ಅವರ ಪುತ್ರ ಚೇತನ್ ಅವರು ಸಭಾಂಗಣ ನಿರ್ಮಾಣಕ್ಕೆ ರೂ. 5 ಲಕ್ಷ ನೀಡಿದ್ದಾರೆ. ಈ ಅನುದಾನವನ್ನು ಬಳಸಿಕೊಂಡು ಶತಮಾನೋತ್ಸವ ತೆರೆದ ಸಭಾಂಗಣ ನಿರ್ಮಿಸಲಾಗುತ್ತಿದೆ.