ಸಿದ್ದಾಪುರ, ಫೆ. 1: ಸಮೀಪದ ಪೊನ್ನಪ್ಪಸಂತೆ ಇಸ್ಲಾಂ ಯೂತ್ ವಿಂಗ್ ವತಿಯಿಂದ ನಡೆದ ಮದರಸ ವಿದ್ಯಾರ್ಥಿಗಳ ದಫ್ ಸ್ಪರ್ಧೆಯಲ್ಲಿ ಕಲ್ಲುಬಾಣೆಯ ದಾರುಲ್ ಇಸ್ಲಾಂ ಮದರಸ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಜಿಲ್ಲೆಯ 10 ಮದರಸ ವಿದ್ಯಾರ್ಥಿಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಪೊನ್ನಪ್ಪಸಂತೆಯ ಇಸ್ಲಾಂ ಮದರಸ ದ್ವಿತೀಯ ಹಾಗೂ ಅರೆಕಾಡಿನ ಮುನೀರುಲ್ ಇಸ್ಲಾಂ ಮದರಸ ತೃತೀಯ ಸ್ಥಾನ ಪಡೆದುಕೊಂಡಿದೆ. ಇಸ್ಲಾಂ ಮದರಸ ಅಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊನ್ನಪ್ಪಸಂತೆ ಮಸೀದಿ ಅಧ್ಯಕ್ಷ ಮುಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ವೆಳಿಯಂಬ್ರದ ಇರ್ಶಾದಿಯ್ಯ ಬುರ್ಧಾ ಸಂಘದ ವತಿಯಿಂದ ಬುರ್ಧಾ ಮಜ್ಲಿಸ್ ನಡೆಯಿತು.

ಕಾರ್ಯಕ್ರಮದಲ್ಲಿ ಪನ್ನಪ್ಪಸಂತೆ ಖತೀಬ್ ಮುನೀರ್ ಬಾಖವಿ, ತಿತಿಮತಿ ಖತೀಬ್ ಮಾಹಿನ್ ದಾರಿಮಿ, ಯೂತ್ ವಿಂಗ್ ಅಧ್ಯಕ್ಷ ಪೂಕೋಯ ತಙÐಳ್, ಪ್ರಮುಖರಾದ ಮಜೀದ್ ಬಾಖವಿ, ಹುಸೈನ್ ಅಝ್ಹರಿ, ಎಸ್.ಎಸ್ ಮುಸ್ತಫ, ಇಲ್ಯಾಸ್, ನೌಶಾದ್, ಸಿ.ಕೆ ಮುಸ್ತಫ ಮತ್ತಿತರರು ಇದ್ದರು.