ನಾಪೆÇೀಕ್ಲು, ಫೆ. 1: ಒಂದು ದೇಶದ ವಿರುದ್ಧ ಯುದ್ಧ ಸಾರಬೇಕಾದರೆ ಯಾವದೇ ಯುದ್ಧ ವಿಮಾನ, ಶಸ್ತ್ರಾಸ್ತ್ರ, ಸೈನಿಕರ ಅಗತ್ಯವಿಲ್ಲ. ಆ ದೇಶದ ಯುವ ಜನತೆಯನ್ನು ಮಾದಕ ವ್ಯಸನಿಗಳಾಗಿ ಪರಿವರ್ತಿಸಿದರೆ ಆ ದೇಶವನ್ನು ಗೆದ್ದಂತೆ ಎಂದು ಮಡಿಕೇರಿ ವೈದ್ಯಕೀಯ ಕಾಲೇಜಿನ ಸಹಪ್ರಾಧ್ಯಾಪಕ ಡಾ. ರೂಪೇಶ್ ಗೋಪಾಲ್ ಹೇಳಿದರು.

ನಾಪೆÇೀಕ್ಲು ಲಯನ್ಸ್ ಸಂಸ್ಥೆ ಮತ್ತು ನಾಪೆÇೀಕ್ಲು ಪ್ರಥಮ ದರ್ಜೆ ಪದವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಾದಕ ವ್ಯಸನಿಗಳ ಸಮಸ್ಯೆ, ರಸ್ತೆ ಸುರಕ್ಷೆ ಹಾಗೂ ವಾಹನ ವಿಮೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಶರೀರಕ್ಕೆ ಕೆಟ್ಟದ್ದು ಉಂಟುಮಾಡುವದನ್ನು ಹಾಗೂ ಕಾನೂನು ಬಾಹಿರವಾಗಿ ಮಾರಾಟ ಮಾಡುವ ವಸ್ತುಗಳನ್ನು ಮಾದಕ ದ್ರವ್ಯ ಎನ್ನಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಮದÀ್ಯ, ಕೆಫಿನ್, ಗಾಂಜಾ, ಕೊಕ್ಕೆನ್, ಕೆಲವು ಅಣಬೆಗಳು, ಪೈಂಟ್, ತಿನ್ನರ್, ಫೆವಿಕಾಲ್, ಹೆರಾಯಿನ್, ತಂಬಾಕು, ಕೋರೆಕ್ಸ್, ನಿದ್ದೆ ಮಾತ್ರೆಗಳು, ನೈಲ್ ಪಾಲಿಶ್ ಇವೆಲ್ಲಾ ಮಾದಕ ಪದಾರ್ಥಗಳಾಗಿವೆ. ಕೊಡಗು ಜಿಲ್ಲೆಯಲ್ಲಿ ಮದ್ಯ, ಗಾಂಜಾ, ಫೆವಿಕಾಲ್, ನೈಲ್ ಪಾಲಿಶ್‍ಗಳಂತಹವನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತಿದೆ. ಇದನ್ನು ಬೇರೆಯವರಿಂದ ಪ್ರಭಾವಿತರಾಗಿ ಸ್ನೇಹದಿಂದ, ಒತ್ತಡದಿಂದ ಬಲತ್ಕಾರದಿಂದ, ಕುತೂಹಲದಿಂದ ಮೋಜು, ಪಾರ್ಟಿಗಾಗಿ ಯುವ ಪೀಳಿಗೆ ಅಭ್ಯಸಿಸುತ್ತಿದ್ದಾರೆ. ಇವೆಲ್ಲವೂ ಮಾನವನಿಗೆ ಕ್ಷಣಿಕ ಸುಖ ನೀಡುತ್ತಿದೆಯಾದರೂ ಆತನ ಬದುಕಿನಲ್ಲಿ ಕೆಟ್ಟ ಪರಿಣಾಮವನ್ನು ಬೀರುತ್ತಿದೆ. ಇದು ತಲೆ ಕೂದಲಿನಿಂದ ಕಾಲಿನ ಉಗುರಿನವರೆಗೂ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇದರಿಂದ ಕುಟುಂಬ ಕಲಹಗಳು ಸಮಾಜದಲ್ಲಿ ಅಗೌರವ, ಬುದ್ಧಿ ಸ್ಥಿಮಿತ, ನರ ದೋಷಗಳು, ಮಾನಸಿಕ ಖಾಯಿಲೆ, ಖಿನ್ನತೆ, ಆತ್ಮಹತ್ಯಾ ಮನೋಭಾವ, ಲೈಂಗಿಕ ಸಮಸ್ಯೆ, ಹೃದಯ ಸಮಸ್ಯೆ, ಅಂಗವೈಕಲ್ಯತೆ, ಕ್ಯಾನ್ಸರ್, ಲಕ್ವಾ, ದೃಷ್ಟಿ ದೋಷÀ, ಉಸಿರಾಟದ ತೊಂದರೆ ಸೇರಿದಂತೆ ಮಾರಾಣಾಂತಿಕ ಸಮಸ್ಯೆಗಳು ಉಂಟಾಗಲಿವೆ. ಇದಕ್ಕೆ ಸೂಕ್ತ ಸಮಯದಲ್ಲಿ ತಜ್ಞ ವೈದ್ಯರನ್ನು ಭೇಟಿ ನೀಡಿದರೆ ಚಿಕಿತ್ಸೆಯ ಮೂಲಕ ಪರಿಹರಿಸಬಹುದು. ಯುವ ಪೀಳಿಗೆ ಯಾವದೇ ಒತ್ತಡಕ್ಕೆ ಮಣಿಯದೆ ಮಾದಕ ವಸ್ತುಗಳ ಸೇವನೆಯಿಂದ ದೂರವಿರುವದರಿಂದ ಉತ್ತಮ ನಾಗರಿಕರಾಗಿ ಉತ್ತಮ ಸಮಾಜದ, ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ರಸ್ತೆ ಸುರಕ್ಷತೆ ಬಗ್ಗೆ ಮಾತನಾಡಿದ ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ನಂಜುಂಡ ಸ್ವಾಮಿ ದೇಶದ ಆರ್ಥಿಕತೆ ಮತ್ತು ಸುಭದ್ರತೆ ಇಂದಿನ ಯುವ ಜನತೆಯ ಕೈಯಲ್ಲಿದೆ. ಇಂದಿನ ಆಧುನಿಕ ಜಗತ್ತಿಗೆ ಅನುಗುಣವಾಗಿ ಅತೀವೇಗದ ವಾಹನಗಳು ಇಂದು ರಸ್ತೆಗಿಳಿದಿವೆ. ಆ ವಾಹನಗಳನ್ನು ಯಾವ ರಸ್ತೆಯಲ್ಲಿ ಎಷ್ಟೆಷ್ಟು ವೇಗದಲ್ಲಿ ಓಡಿಸಬೇಕು ಎಂಬುದನ್ನು ವಾಹನದ ಮಾಲೀಕರು ಮತ್ತು ಚಾಲಕರು ತಿಳಿದುಕೊಳ್ಳಬೇಕು. ಇದರಿಂದ ರಸ್ತೆ ಅಪಘಾತವನ್ನು ತಪ್ಪಿಸಬಹುದಾಗಿದೆ ಎಂದರು.

ಇಂದು ರಸ್ತೆ ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದರೊಂದಿಗೆ ಅಂಗವೈಕಲ್ಯತೆ ಕೂಡ ಉಂಟಾಗುತ್ತಿದೆ. ಮೃತ ವ್ಯಕ್ತಿಗಳ ಕುಟುಂಬದವರ ನಂತರದ ಬದುಕು ಶೋಚನೀಯವಾಗಿದೆ. ಪ್ರಾಣ ಹಾನಿಯೊಂದಿಗೆ ಮಾನಸಿಕ ಕ್ಷೋಭೆ, ಆರ್ಥಿಕ ನಷ್ಟ, ಅಂಗ ವೈಕಲ್ಯವಾದರೆ ಅವರನ್ನು ನೋಡಿಕೊಳ್ಳುವ ಕಷ್ಟ. ಇದೊಂದು ನರಕ ಯಾತನೆಯಾಗಿದೆ. ಎಲ್ಲರೂ ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಅರಿತುಕೊಂಡು ತಮ್ಮ ಹಾಗೂ ತಮ್ಮ ಸಂಸಾರದ ನೆಮ್ಮದಿಗೆ ಶ್ರಮ ವಹಿಸಬೇಕು ಎಂದರು.

ಮೊಬೈಲ್ ಬಳಕೆ, ಮದ್ಯ, ಮಾದಕ ಪದಾರ್ಥಗಳ ಸೇವನೆಯಿಂದ ಹೆಚ್ಚಿನ ಅನಾಹುತಗಳು ಸಂಭವಿಸುತ್ತವೆ. ಅದರೊಂದಿಗೆ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ, ಮಳೆ, ಮಂಜು ಮುಸುಕಿದ ವಾತಾವರಣ, ಹಗಲು - ರಾತ್ರಿ ಎಡೆಬಿಡದೆ ವಾಹನ ಚಲಾಯಿಸುವದರ ಬಗ್ಗೆ ಎಲ್ಲರೂ ಗಮನ ಹರಿಸಬೇಕು. ಸೀಟ್ ಬೆಲ್ಟ್, ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸುವದರಿಂದ ಪ್ರಾಣಾಪಾಯವನ್ನು ತಡೆಯಬಹುದಾಗಿದೆ. ಪಾದಚಾರಿಗಳು ಕೂಡ ರಸ್ತೆ ನಿಯಮವನ್ನು ಪಾಲಿಸಬೇಕು. ಬಸ್ಸು ಹತ್ತುವಾಗ ಹಾಗೂ ಇಳಿಯುವಾಗ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು. ಎಲ್ಲ ನಾಗರಿಕರು ಸಂಚಾರಿ ನಿಯಮಗಳ ಬಗ್ಗೆ ಪೂರ್ಣ ವಿವರಗಳನ್ನು ಅರಿತುಕೊಂಡಲ್ಲಿ ಹೆಚ್ಚಿನ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ವಿನಯ್ ಈಗಿನ ಯುವ ಪೀಳಿಗೆ ಆಕರ್ಷಣೆಗಳಿಂದ ಮಾದಕ ದ್ರವ್ಯದ ದಾಸರಾಗುತ್ತಿದ್ದಾರೆ. ಒಮ್ಮೆ ಇದನ್ನು ಕಲಿತರೆ ಇದರಿಂದ ದೂರವಾಗಲು ಸಾಧ್ಯವಿಲ್ಲ. ಮಾದಕ ವ್ಯಸನಿಗಳು ಯಾವ ಕ್ರೌರ್ಯವನ್ನು ಮಾಡಲು ಹೇಸುವದಿಲ್ಲ. ಇದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ವಾಹನ ವಿಮೆಯ ಬಗ್ಗೆ ಗೋಣಿಕೊಪ್ಪ ಲಯನ್ಸ್ ಕ್ಲಬ್‍ನ ಎಂ.ಎಂ.ಗಣಪತಿ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಕಾವೇರಿ ಪ್ರಕಾಶ್ ವಹಿಸಿದ್ದರು.

ವೇದಿಕೆಯಲ್ಲಿ ನಾಪೆÇೀಕ್ಲು ಲಯನ್ಸ್ ಕ್ಲಬ್‍ನ ಕೇಟೋಳಿರ ರತ್ನಾ ಚರ್ಮಣ್ಣ, ಕೇಟೋಳಿರ ಕುಟ್ಟಪ್ಪ, ಡಾ. ಬೊಪ್ಪಂಡ ಜಾಲಿ ಬೋಪಯ್ಯ ಇದ್ದರು. ಮಮತ ಮತ್ತು ತಂಡದಿಂದ ಪ್ರಾರ್ಥನೆ, ಪ್ರಾಧ್ಯಾಪಕ ಮನೋಜ್ ಸ್ವಾಗತ, ಲೀನಾ ನಿರೂಪಿಸಿ, ವಿನೋದ್ ವಂದಿಸಿದರು.