ನಾಪೆÇೀಕ್ಲು, ಫೆ. 1: ವಿದ್ಯಾರ್ಥಿಗಳ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಲು ಕಾಲೇಜು ಹಂತದಲ್ಲಿ ಶಿಕ್ಷಣದ ಆಯ್ಕೆ ಪ್ರಮುಖ ಎಂದು ಮಡಿಕೇರಿ ತಾಲೂಕು ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಲಕ್ಷ್ಮಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮೀಪದ ಹೊದವಾಡ ರಾಫಲ್ಸ್ ಇಂಟರ್‍ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮುಂದಿನ ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳೇ ಅಂತಿಮ ಆಯ್ಕೆ ಮಾಡಿಕೊಳ್ಳಬೇಕು. ಬೇರೆಯವರ ಉಪದೇಶಕ್ಕೆ, ಒತ್ತಡಕ್ಕೆ ಮಣಿದು ತಮ್ಮಿಷ್ಟಕ್ಕೆ ವಿರೋಧವಾಗಿ ಆಯ್ಕೆಮಾಡಿಕೊಂಡರೆ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದರು.
ಶಿಕ್ಷಣದೊಂದಿಗೆ ವ್ಯಕ್ತಿತ್ವ ಮತ್ತು ಜೀವನ ಎರಡನ್ನೂ ರೂಪಿಸಿಕೊಳ್ಳಬಹುದು ಎಂದ ಅವರು ಹೆಚ್ಚು ಹೆಚ್ಚು ಓದಬೇಕು. ಓದಲು, ಕಲಿಯಲು ವಯಸ್ಸನ್ನು ಲೆಕ್ಕ ಹಾಕಬೇಡಿ ಎಂದು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ನಾಪೆÇೀಕ್ಲು ಪೆÇಲೀಸ್ ಠಾಣಾ ಎ.ಎಸ್.ಐ. ದೇವರಾಜ್ ಮಾತನಾಡಿ, ವಿದ್ಯಾರ್ಥಿಗಳು ದುಷ್ಟಚಟಗಳಿಗೆ ಬಲಿಯಾಗಬಾರದು. ಒಮ್ಮೆ ಅದರ ದಾಸರಾದರೆ ನಂತರ ಅದರಿಂದ ದೂರವಾಗಲು ಸಾಧ್ಯವಿಲ್ಲ. ಕಾನೂನನ್ನು ಗೌರವಿಸಿ ಉತ್ತಮ ನಾಗರೀಕರಾಗುವದರ ಮೂಲಕ ಎಲ್ಲರಿಗೂ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹೊದವಾಡ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಪರ್ಣಾ, ನಾಪೆÇೀಕ್ಲು ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಬಿ.ಎಂ. ಶಾರದ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಮೆಹಬೂಬ್ ಸಾಬ್ ವಹಿಸಿದ್ದರು. ವೇದಿಕೆಯಲ್ಲಿ ಎಂ.ಎ. ಮನ್ಸೂರ್ ಅಲಿ, ಕೊಟ್ಟಮುಡಿ ಹಂಸ ಇದ್ದರು. ಕಾಲೇಜು ಪ್ರಾಂಶುಪಾಲ ಮುಜೀಬ್ ಕಾಲೇಜಿನ ವರದಿ ವಾಚಿಸಿದರು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ಉಪನ್ಯಾಸಕಿಯರಾದ ಅನುಷಾ ಸ್ವಾಗತ, ಶಫೀನಾ ನಿರೂಪಿಸಿ, ವಂದಿಸಿದರು.