ಗೋಣಿಕೊಪ್ಪ ವರದಿ, ಫೆ. 1 : ಹಾಕಿ ಇಂಡಿಯಾ ವತಿಯಿಂದ ಕೇರಳದ ಕೊಲ್ಲಂ ಮೈದಾನದಲ್ಲಿ ನಡೆಯುತ್ತಿರುವ ಎ. ಡಿವಿಜನ್ ಕಿರಿಯ ಬಾಲಕಿಯರ ರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ ಹಾಕಿ ಕೂರ್ಗ್ ತಂಡ ಮೊದಲ ಗೆಲವು ದಾಖಲಿಸಿದೆ.

ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ 5-1 ಗೋಲುಗಳ ಮೂಲಕ ಗೆಲವು ದಾಖಲಿಸಿದೆ. ಹಾಕಿಕೂರ್ಗ್ ಪರ ಲೀಲಾವತಿ ಹಾಗೂ ಶಯ ಕಾವೇರಮ್ಮ ತಲಾ 2 ಗೋಲು ಹೊಡೆದರು. ಜಾಹ್ನವಿ 1 ಗೋಲು ಹೊಡೆದರು. ತಂಡದ ತರಬೇತುದಾರರಾಗಿ ಕಾವ್ಯಶ್ರೀ, ವ್ಯವಸ್ಥಾಪಕಿಯಾಗಿ ಹರಿಣಾಕ್ಷಿ ಕಾರ್ಯನಿರ್ವಹಿಸುತ್ತಿದ್ದಾರೆ.