ಶ್ರೀಮಂಗಲ, ಫೆ. 4: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಡಿಕೇರಿ, ತಾವರಗೇರಿ ಮೂಂದ್ ನಾಡ್ ಕೊಡವ ಸಮಾಜ ಟಿ ಶೆಟ್ಟಿಗೇರಿ, ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ ಟಿ. ಶೆಟ್ಟಿಗೇರಿ ಹಾಗೂ ಸಂಭ್ರಮ ಪೊಮ್ಮಕಡ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆ ಶೆಟ್ಟಿಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ತಾ. 25 ರಂದು ಪೂರ್ವಾಹ್ನ 10 ಗಂಟೆಗೆ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಪುದಿಯಕ್ಕಿಕೂಳುಂಬೋ ಹಾಗೂ ಆಟ್-ಪಾಟ್ ಸಮಾರೋಪ ಸಮಾರಂಭ ನಡೆಸುವಂತೆ ಎರಡನೇ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಪಿ.ಕೆ. ಪೊನ್ನಪ್ಪ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ನಿವೃತ್ತ ಮುಖ್ಯೋಪಾಧ್ಯಾಯ ಚೊಟ್ಟೆಯಂಡಮಾಡ ಎಸ್. ಚಂಗಪ್ಪ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ. ಬಾಲಕೃಷ್ಣ ಉಪಸ್ಥಿತರಿರುವರು. ಕೊಡವ ತಕ್ಕ್ ಎಳ್ತ್‍ಕಾರಡ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಪುದಿಯಕ್ಕಿಕೂಳ್ ಈ ಬಗ್ಗೆ ವಿಚಾರ ಮಂಡನೆ ಮಾಡಿದ್ದಾರೆ.

ಈ ಸಂದರ್ಭ ತಾವಳಗೇರಿ ಮೂಂದ್‍ನಾಡ್ ಗೌರವ ಅಧ್ಯಕ್ಷ ಮಾಯಣಮಾಡ ಎಂ. ಪೂಣಚ್ಚ ದಾನಿಗಳು ಹಾಗೂ ಸಮಾಜ ಸೇವಕಿ ಕೈಬುಲೀರ ಪಾರ್ವತಿ ಬೋಪಯ್ಯ ಹಾಗೂ ಚೆಟ್ಟಂಗಡ ರವಿ ಸುಬ್ಬಯ್ಯ ಅವರನ್ನು ಸನ್ಮಾನಿಸಲಾಗುವದು.

ಕೊಡವ ಜಾನಪದ ಆಟ್-ಪಾಟ್ ತಜ್ಞ ಹಾಗೂ ತರಬೇತು ದಾರರಾದ ಕಾಳಿಮಾಡ ಮೋಟಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಆಟ್-ಪಾಟ್ ಪ್ರದರ್ಶನ ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವಂತೆ ತೀರ್ಮಾನಿ ಸಲಾಯಿತು. ಈ ವೇಳೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ, ಕೊಡವ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ಕಾರ್ಯದರ್ಶಿ ಮನ್ನೇರ ರಮೇಶ್, ಕಟ್ಚೇರ ಈಶ್ವರ್, ಚೆಟ್ಟಂಗಡ ರವಿ ಸುಬ್ಬಯ್ಯ, ಅಕಾಡೆಮಿ ಸದಸ್ಯರಾದ ಚಂಗುಲಂಡ ಸೂರಜ್, ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಉಪಸ್ಥಿತರಿದ್ದರು.