ಗೋಣಿಕೊಪ್ಪ ವರದಿ: ಅರುವತ್ತೊಕ್ಲು ಸರ್ವದೈವತಾ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯನ್ನು ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಆಚರಿಸಲಾಯಿತು.
ಮುಖ್ಯ ಶಿಕ್ಷಕ ಪಿ.ಆರ್. ಪ್ರದೀಪ್ ರಾಷ್ಟ್ರೀಯ ಭಾವೈಕ್ಯತಾ ದಿನದ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು. ಜೆ.ಸಿ.ಐ. ನಿಸರ್ಗ ಘಟಕದ ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ. ಪ್ರಮಾಣ ವಚನವನ್ನು ಬೋಧಿಸಿದರು.ಸುಂಟಿಕೊಪ್ಪ: ಜೆಸಿಐ ಸಂಸ್ಥೆ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ ಆಚರಿಸಲಾಯಿತು. ರಾಷ್ಟ್ರೀಯ ಭಾವೈಕ್ಯತೆ ಕುರಿತು ಮಾತನಾಡಿದ ಜೆಸಿಐ ವಲಯ ಕಾರ್ಯದರ್ಶಿ ಡೆನಿಸ್ ಡಿಸೋಜ, ಪ್ರತಿಯೊಬ್ಬರು ದೇಶದ ಸಮಗ್ರತೆ, ರಾಷ್ಟ್ರೀಯತೆ ಹಾಗೂ ಭಾವೈಕ್ಯತೆಯನ್ನು ಎತ್ತಿ ಹಿಡಿಯುವ ಮೂಲಕ ರಾಷ್ಟ್ರ ನಿರ್ಮಾಣ ಕಾಯಕದಲ್ಲಿ ತೊಡಗಬೇಕು ಎಂದರು. ಜೆಸಿಐ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಹೆಚ್.ಆರ್. ಅರುಣ್‍ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕ ಟಿ.ಜಿ. ಪ್ರೇಮ್‍ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಸಿಐ ಸಂಸ್ಥೆಯ ಉಪಾಧ್ಯಕ್ಷ ಹೆಚ್.ಆರ್. ನಿರಂಜನ್, ಕಾರ್ಯದರ್ಶಿ ಸುರೇಶ್ ಕುಶಾಲಪ್ಪ, ತರಬೇತಿ ವಿಭಾಗದ ನೀತು ಗಂಗಾಧರ್, ಸದಸ್ಯರಾದ ವಿಘ್ನೇಶ್ ಭೂತನಕಾಡು, ಸಿ.ಬಿ. ಪ್ರಕಾಶ್, ಮುರುಗೇಶ್, ಪ್ರಣೀತ್ ಇತರರು ಪಾಲ್ಗೊಂಡಿದ್ದರು.ವೀರಾಜಪೇಟೆ: ವೀರಾಜಪೇಟೆ ಕಾವೇರಿ ಕಾಲೇಜು ವಿದ್ಯಾಸಂಸ್ಥೆಯಲ್ಲಿ ಪ್ರಾಂಶುಪಾಲ ಸಿ.ಎಂ. ನಾಚಪ್ಪ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ, ಸಹಬಾಳ್ವೆ, ಪ್ರೀತಿಪೂರ್ವಕ ಬದುಕು ಭಾವೈಕ್ಯತೆ ಹೆಚ್ಚಿಸುತ್ತದೆ ಎಂದು ತಿಳಿಹೇಳಿದರು. ವಿದ್ಯಾರ್ಥಿ ಜೀವನದಲ್ಲಿ ಈ ರೀತಿಯ ಚಟುವಟಿಕೆ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಉಪನ್ಯಾಸಕರುಗಳಾದ ಪ್ರೊ. ಆನಂದ್ ಕಾರ್ಲ, ನಾಗರಾಜ್ ಉಪಸ್ಥಿತರಿದ್ದರು.