ಮಡಿಕೇರಿ, ಫೆ. 4: ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪತ್ರಿಕಾಭವನದಿಂದ ಅರ್ಜಿಗಳನ್ನು ಪಡೆದುಕೊಂಡು ತಾ. 10 ರೊಳಗೆ ಸಲ್ಲಿಸಬೇಕಾಗಿದೆ. ನವೀಕರಣಕ್ಕೆ ರೂ. 600 ಹಾಗೂ ನೂತನ ಸದಸ್ಯರಿಗೆ ರೂ. 700 ಎಂದು ನಿಗದಿಪಡಿಸಲಾಗಿದೆ. ತಾ. 10 ರ ನಂತರ ಬರುವ ಯಾವದೇ ಅರ್ಜಿಗಳನ್ನು ಸ್ವೀಕರಿಸಲಾಗುವದಿಲ್ಲ. ಅಲ್ಲದೆ ವಾಹನಗಳನ್ನು ಹೊಂದಿರುವವರು ಪೊಲೀಸ್ ಇಲಾಖೆಯ ಪ್ರೆಸ್ ಸ್ಟಿಕ್ಕರ್ ಪಡೆಯಲು ಒಂದು ವಾಹನಕ್ಕೆ ನೂರು ರೂಪಾಯಿ, ಎರಡು ವಾಹನವಾದರೆ 200 ರೂ.ಗಳನ್ನು ಪ್ರತ್ಯೇಕವಾಗಿ ನೀಡಬೇಕು. ಸಾಕಷ್ಟು ಜನರು ತಮ್ಮ ವಾಹನಗಳಿಗೆ ಪ್ರೆಸ್ ಎಂಬ ಸ್ಟಿಕ್ಕರ್ ಬಳಸುತ್ತಿರುವದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಆದ್ದರಿಂದ ಇಲಾಖೆ ಅಧಿಕೃತವಾಗಿ ಸ್ಟಿಕ್ಕರ್ ಮುದ್ರಣ ಮಾಡಿ ನೀಡಲಿದೆ. ಬೇಕಾದವರು ಸದಸ್ಯತ್ವದ ಹಣದೊಂದಿಗೆ ಸ್ಟಿಕ್ಕರ್‍ಗೆ ಹಣವನ್ನು ಪಾವತಿಸಬೇಕಾಗಿದೆ.
ಮಾಧ್ಯಮ ಕ್ಷೇತ್ರದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುವವರಿಗೆ ಮಾತ್ರ ಸದಸ್ಯತ್ವ ನೀಡಲಾಗುತ್ತದೆ. ಸದಸ್ಯತ್ವ ಪಡೆಯುವವರು ಮಾಧ್ಯಮ ಕ್ಷೇತ್ರದಲ್ಲಿ ಎರಡು ವರ್ಷ ಅನುಭವ ಹೊಂದಿರಬೇಕು ಹಾಗೂ 21 ವರ್ಷ ಮೇಲ್ಪಟ್ಟಿರಬೇಕು. ಜೊತೆಗೆ ಕನಿಷ್ಟ ಎಸ್.ಎಸ್.ಎಲ್.ಸಿ. ಪಾಸಾಗಿರಬೇಕು. ನೂತನ ಸದಸ್ಯರಾಗುವವರು ಇದಕ್ಕೆ ಬೇಕಾದ ದಾಖಲೆಗಳನ್ನು ಸಲ್ಲಿಸುವದು ಕಡ್ಡಾಯ.
ಅಪೂರ್ಣ ಅರ್ಜಿಗಳನ್ನು ಮಾನ್ಯ ಮಾಡಲಾಗುವದಿಲ್ಲ. ಎಲ್ಲಾ ಪತ್ರಿಕೆಗಳಿಗೆ ಆರ್.ಎನ್.ಐ. ನೋಂದಣಿ ಕಡ್ಡಾಯ. ವಾರಪತ್ರಿಕೆ ವರ್ಷದ 48 ವಾರಗಳಲ್ಲಿ 43 ಸಂಚಿಕೆಗಳು ಪ್ರಕಟವಾಗಿರಲೇಬೇಕು. ಹೆಚ್ಚಿನ ಮಾಹಿತಿಗೆ ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ- 9482982228 ನ್ನು ಸಂಪರ್ಕಿಸಬಹುದಾಗಿದೆ.