ಗೋಣಿಕೊಪ್ಪ ವರದಿ, ಫೆ. 4 : ಎ. ಡಿವಿಜನ್ ಕಿರಿಯ ಬಾಲಕಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸೋಲನುಭವಿಸಿರುವ ಹಾಕಿಕೂರ್ಗ್ ತಂಡ ಟೂರ್ನಿಯಿಂದ ನಿರ್ಗಮಿಸಿದೆ.
ಕೇರಳದ ಕೊಲ್ಲಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಾಕಿ ಪಂಜಾಬ್ ವಿರುದ್ದ 0-2 ಗೋಲುಗಳ ಮೂಲಕ ಸೋಲು ಕಂಡಿತು. ಇದರಿಂದಾಗಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಲಾಗದೆ ಟೂರ್ನಿಯಿಂದ ಹೊರ ಬಿದ್ದಿದೆ. ಅಡಿದ 3 ಪಂದ್ಯಗಳಲ್ಲಿ ಮುಂಬೈ ವಿರುದ್ದ ಏಕೈಕ ಗೆಲುವು ದಾಖಲಿಸಿ, 2 ಪಂದ್ಯಗಳಲ್ಲಿ ಸೋಲನುಭವಿಸಿ ನಿರ್ಗಮಿಸಿದೆ.
ತಂಡದಲ್ಲಿ ಆರ್. ಅನ್ನಪೂರ್ಣ, ಅಟಗಾರರುಗಳಾಗಿ ಹೆಚ್.ಜಿ. ಧನುಶ್ರೀ, ಕೆ. ಎ. ಪಾರ್ವತಿ, ಚಿ. ಭೂಮಿಕಾ, ಶಯ ಕಾವೇರಮ್ಮ, ಕೆ.ಎ. ವಿನ್ಯಶ್ರೀ, ಕೆ. ಜಿ. ಸಂಧ್ಯಾ, ಪಿ.ಟಿ. ಕಾವೇರಮ್ಮ, ಮಂಜವ್ವ, ಕೆ.ಕೆ. ಗೌತಮಿ, ಪಿ.ಟಿ. ಶಿಲ್ಪ, ಲೀಲಾವತಿ, ಎಸ್. ಅದಿರಾ, ಅಪ್ಸರ, ಪ್ರೇಕ್ಷಾ, ಎಂ.ಎಂ. ಪದ್ಮಿನಿ, ತರಬೇತು ದಾರರಾಗಿ ಕಾವ್ಯಶ್ರೀ, ವ್ಯವಸ್ಥಾಪಕಿ ಯಾಗಿ ಹರಿಣಾಕ್ಷಿ ಪಾಲ್ಗೊಂಡಿದ್ದರು.