ಮಡಿಕೇರಿ, ಫೆ. 4: ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 156ನೇ ಜನ್ಮ ದಿನಾಚರಣೆಯ ಅಂಗವಾಗಿ ದಿ. ಕೂತಂಡ ಪೂವಯ್ಯ ಹಾಗೂ ಪಾರ್ವತಿ ಪೂವಯ್ಯ ಸ್ಮರಣಾರ್ಥ ಜಿಲ್ಲಾಮಟ್ಟದ ಅಂತರ ಕಾಲೇಜು ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದ, ಪ್ರಾಯೋಜಕ ಕೆ.ಪಿ. ಉತ್ತಪ್ಪ ಮತ್ತು ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಪಾಲ್ಗೊಂಡಿದ್ದರು. ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿ.ಎಂ. ನಾಚಪ್ಪ ಅಧ್ಯಕ್ಷತೆ ವಹಿಸಿದ್ದರು.

ಭಾಷಣ ಸ್ಪರ್ಧೆಯಲ್ಲಿ 15 ಕಾಲೇಜುಗಳು ಮತ್ತು 30 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಂಗ್ಲ ಭಾಷಣ ಸ್ಪರ್ಧೆಯಲ್ಲಿ ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಆರ್. ಕವನ ಪ್ರಥಮ, ಮೂರ್ನಾಡು ಪದವಿಪೂರ್ವ ಕಾಲೇಜಿನ ಪಿ.ಪಿ. ಶ್ರೀರಕ್ಷ ದ್ವಿತೀಯ ಹಾಗೂ ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜಿನ ಕೆ.ಬಿ. ಮೊಹಮ್ಮದ್ ಫರಾಜ್ ತೃತೀಯ ಸ್ಥಾನ ಪಡೆದುಕೊಂಡೆದ್ದಾರೆ. ಕನ್ನಡ ಭಾಷಣ ಸ್ಪರ್ಧೆಯಲ್ಲಿ ಕಾವೇರಿ ಪದವಿ ಕಾಲೇಜಿನ ಟಿ.ಎಂ. ವಿನಿಷ ಪ್ರಥಮ, ದ್ವಿತೀಯ ಸ್ಥಾನವನ್ನು, ಪಿ.ಎಸ್. ರೇಷ್ಮ ಹಾಗೂ ನೆಲ್ಲಿಹುದಿಕೇರಿ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಎಂ.ಎಸ್. ಪೂಜ ಪಡೆದುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ಉಪನ್ಯಾಸಕ ಅಕ್ಷತ ನಾಯಕ್, ತೀರ್ಪು ಗಾರರಾಗಿ ಚಟ್ಟಂಗಡ ರವಿ ಸುಬ್ಬಯ್ಯ, ಮಮತ ಕಾವೇರಪ್ಪ ಹಾಗೂ ಜಯಂತಿ ಕಾರ್ಯನಿರ್ವಹಿಸಿದರು. ವಿವೇಕಾನಂದ ಜಯಂತಿ ಅಂಗವಾಗಿ ನಿವೃತ್ತ ಅಧ್ಯಾಪಕರುಗಳಾದ ಕೆ.ಎಂ. ಕಾರ್ಯಪ್ಪ, ಸಿ.ಎಂ. ಪೂವಮ್ಮ ಹಾಗೂ ಎಂ.ಎಸ್. ದೇವಕಿ ಅವರನ್ನು ಸನ್ಮಾನಿಸಲಾಯಿತು.